ಬುಧವಾರ, ನವೆಂಬರ್ 20, 2019
27 °C
ಯಡಿಯೂರಪ್ಪ ವಿರುದ್ಧವೂ ಗೌಡರ ವಾಗ್ದಾಳಿ

‘ಸಿದ್ದರಾಮಯ್ಯಗೆ ಚುನಾವಣೆ ಬೇಕಾಗಿದೆ’

Published:
Updated:
Prajavani

ಬೆಂಗಳೂರು: ‘ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದಿರುವ ಅವಧಿಯನ್ನು ಪೂರ್ಣಗೊಳಿಸಲಿ. ತಕ್ಷಣಕ್ಕೆ ಚುನಾವಣೆಗೆ ಹೋಗಬೇಕು ಎಂಬ ಆತುರ ನಮಗಿಲ್ಲ. ಅದೇನಿದ್ದರೂ ಸಿದ್ದರಾಮಯ್ಯಗೆ ಇರಬಹುದು’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಗುಡುಗಿದರು.

‘ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಅಹಿಂದ ವರ್ಗದ ದೊಡ್ಡ ಮುಖಂಡರಾಗಿದ್ದಾರೆ. ನಾನು ಯಾವ ಅಹಿಂದ ನಾಯಕ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಕುಟುಕಿದರು.

‘ಈಗ ಸಿದ್ದರಾಮಯ್ಯಗೆ ಚುನಾವಣೆ ಬೇಕಾಗಿದೆ. ವಿರೋಧ ಪಕ್ಷದ ನಾಯಕರಾಗಿದ್ದು, ಮುಂದೆ ಮುಖ್ಯಮಂತ್ರಿಯಾಗಲು ಆತುರಪಡುತ್ತಿರಬಹುದು. ಅದಕ್ಕಾಗಿ ಚುನಾವಣೆ ಎಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಆಗುವವರನ್ನು ಬೇಡ ಎನ್ನಲು ನಾವು ಯಾರು? ಆ ಬಗ್ಗೆ ಕಾಂಗ್ರೆಸ್ ವರಿಷ್ಠರು ನಿರ್ಧರಿಸುತ್ತಾರೆ’ ಎಂದು ಅಸಮಾಧಾನ ಹೊರಹಾಕಿದರು.

ರಾಜ್ಯ ಸರ್ಕಾರಕ್ಕೆ ಬೆಂಬಲ ನೀಡುವು ದಾಗಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರೇನು ಹೇಳುವುದು, ನಾನೇ ಹೇಳುತ್ತಿದ್ದೇನೆ. ಯಡಿಯೂರಪ್ಪ ಅವರೇ ಅಧಿಕಾರ ಪೂರ್ಣಗೊಳಿಸಲಿ. ಬೇಡ ಎಂದು ಹೇಳುವುದಿಲ್ಲ. ಯಾರು ಆಡಳಿತ ನಡೆಸಿದರೂ ನನಗೇನೂ ಆಗಬೇಕಿಲ್ಲ. ಆದರೆ ನಾಳೆಯೇ ಚುನಾವಣೆ ನಡೆದರೆ 224 ಕ್ಷೇತ್ರಗಳಲ್ಲೂ ಗೆಲ್ಲುವ ಶಕ್ತಿ ನಮಗಿಲ್ಲ. ಮತ್ತಷ್ಟು ಸಮಯ ಸಿಕ್ಕರೆ ಪಕ್ಷ ಸಂಘಟಿಸಲು ಸಹಕಾರಿಯಾಗುತ್ತದೆ. ಹಾಗಾಗಿ ಸದ್ಯಕ್ಕೆ ಚುನಾವಣೆ ಬೇಡ ಎಂಬುದು ನಮ್ಮ ಭಾವನೆ’ ಎಂದರು.

ಸಿ.ಎಂ ಮನೆ ಮುಂದೆ ಧರಣಿ: ಗುರುಮಠಕಲ್‌ನಲ್ಲಿ ಜೆಡಿಎಸ್ ಕಾರ್ಯ ಕರ್ತ ಶರಣುಗೌಡ ಪಾಟೀಲ್ ಮೇಲೆ ದೌರ್ಜನ್ಯ ನಡೆಸಿದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳದಿರುವುದನ್ನು ಖಂಡಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನೆ ಮುಂದೆ ಇದೇ 15ರಿಂದ ಧರಣಿ ಆರಂಭಿಸಲಾಗುವುದು ಎಂದು ದೇವೇಗೌಡ ಹೇಳಿದರು.

ಸಿ.ಎಂ ಮನೆ ಮುಂದೆ ಗೌಡರ ಧರಣಿ
ಗುರುಮಠಕಲ್‌ನಲ್ಲಿ ಜೆಡಿಎಸ್ ಕಾರ್ಯಕರ್ತ ಶರಣುಗೌಡ ಪಾಟೀಲ್ ಮೇಲೆ ದೌರ್ಜನ್ಯ ನಡೆಸಿದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳದಿರುವುದನ್ನು ಖಂಡಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನೆ ಮುಂದೆ ಇದೇ 15ರಿಂದ ಧರಣಿ ಆರಂಭಿಸಲಾಗುವುದು ಎಂದು ಎಚ್.ಡಿ.ದೇವೇಗೌಡ ಹೇಳಿದರು.

ಪಕ್ಷದ ಯುವ ಮುಖಂಡನ ಬಾಯಿಗೆ ಪಿಸ್ತೂಲ್ ಇಟ್ಟು ಕೊಲ್ಲುವುದಾಗಿ ಹಿಂಸೆ ನೀಡಿದ್ದಾರೆ. ಮನ ಬಂದಂತೆ ಥಳಿಸಿದ್ದಾರೆ. ಇದೆಲ್ಲವನ್ನು ನೋಡಿದರೆ ರಾಜ್ಯದಲ್ಲಿ ಭಯಹುಟ್ಟಿಸುವ ವಾತಾವರಣ ನಿರ್ಮಾಣವಾಗಿದೆ ಎಂದು ಯಡಿಯೂರಪ್ಪ ವಿರುದ್ದ ವಾಗ್ದಾಳಿ ನಡೆಸಿದರು.

ಪ್ರತಿಕ್ರಿಯಿಸಿ (+)