ಮಂಗಳವಾರ, ಅಕ್ಟೋಬರ್ 15, 2019
29 °C

ಕೊಡಗು: ಸುಂಟಿಕೊಪ್ಪದಲ್ಲಿ ಧಾರಾಕಾರ ಮಳೆ

Published:
Updated:
Prajavani

ಸುಂಟಿಕೊಪ್ಪ: ಸುಂಟಿಕೊಪ್ಪ ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಧಾರಾಕಾರ ಮಳೆ ಸುರಿಯಿತು.
ಬೆಳಿಗ್ಗೆಯಿಂದ ಉರಿ ಬಿಸಿಲಿನಿಂದ ಕೂಡಿದ್ದ ವಾತಾವರಣ ಮದ್ಯಾಹ್ನ 1ರಿಂದ 3ರ ತನಕ ದಿಢೀರನೇ ಸುರಿಯಲಾರಂಭಿಸಿತು.

ರಭಸದ ಮಳೆಯಿಂದ ಚರಂಡಿಗಳು ತುಂಬಿ ರಸ್ತೆ ತುಂಬೆಲ್ಲ ನೀರು ಹರಿಯಲಾರಂಭಿಸಿತು. ದಿಢೀರನೆ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು.

ಕೊಡಗರಹಳ್ಳಿ, ಗದ್ದೆಹಳ್ಳ, ಬಾಳೆಕಾಡು, ಶಾಂತಿಗೇರಿ ಸೇರಿದಂತೆ ಇತರೆಡೆ ರಭಸದ ಮಳೆ ಸುರಿಯಿತು.

 

Post Comments (+)