ಮಂಗಳವಾರ, ಜನವರಿ 28, 2020
21 °C

‘ಖುಲಾಸೆ ಪ್ರಕರಣ: ಮರುಪರಿಶೀಲನೆ ವಿವರ ಸಲ್ಲಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಖುಲಾಸೆಗೊಂಡ ಎಲ್ಲ ಕ್ರಿಮಿನಲ್ ಪ್ರಕರಣಗಳ ಮರುಪರಿಶೀಲನೆಗೆ ಸಂಬಂಧಿಸಿದಂತೆ 2014ರ ಅ.20ರಿಂದ ಈವರೆಗೆ ಎಷ್ಟು ಪ್ರಕರಣಗಳ ಮರುಪರಿಶೀಲನೆ ನಡೆಸಲಾಗಿದೆ ಎಂಬ ಬಗ್ಗೆ ವಿವರ ನೀಡಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಈ ಕುರಿತಂತೆ ವಕೀಲ ಎಸ್. ಉಮಾಪತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

‘ರಾಜ್ಯ, ವಲಯ ಹಾಗೂ ಜಿಲ್ಲಾ ಮಟ್ಟದಲ್ಲಿ ಖುಲಾಸೆ ಮರುಪರಿಶೀಲನಾ ಸಮಿತಿಗಳು ಪ್ರತಿ ತಿಂಗಳು ಎಷ್ಟು ಸಭೆ ನಡೆಸಿವೆ ಹಾಗೂ ಎಷ್ಟು ಪ್ರಕರಣಗಳ ಮರುಪರಿಶೀಲನೆ ನಡೆಸಿವೆ ಎಂದು ಮಾಹಿತಿ ನೀಡಬೇಕು’ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು