ದಾಖಲೆ ತಲುಪಿದ ವಿದ್ಯುತ್‌ ಬೇಡಿಕೆ

ಬುಧವಾರ, ಏಪ್ರಿಲ್ 24, 2019
32 °C

ದಾಖಲೆ ತಲುಪಿದ ವಿದ್ಯುತ್‌ ಬೇಡಿಕೆ

Published:
Updated:

ಬೆಂಗಳೂರು: ನಗರದಲ್ಲಿ ಬಿಸಿಲ ಬೇಗೆ ಹೆಚ್ಚುತ್ತಿದ್ದಂತೆ, ಬೆಸ್ಕಾಂನ ವಿದ್ಯುತ್‌ ಪೂರೈಕೆಯ ಗರಿಷ್ಠ ಬೇಡಿಕೆ (ಪೀಕ್‌ ಲೋಡ್‌) ಪ್ರಮಾಣವು ಏ.2ರಂದು ದಾಖಲೆ ಹಂತ ತಲುಪಿದೆ.

ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಂಪನಿ 5,869 ಮೆಗಾವಾಟ್‌ ವಿದ್ಯುತ್‌ ಪೂರೈಕೆ ಮಾಡಿತ್ತು. ಇದು ಕಳೆ‌ದ ಆರು ವರ್ಷಗಳಲ್ಲೇ ಅತ್ಯಧಿಕ ಪ್ರಮಾಣದ ಬೇಡಿಕೆ ಎನ್ನಲಾಗಿದೆ. ರಾಜ್ಯದಾದ್ಯಂತ ಗರಿಷ್ಠ 25,000 ಮೆಗಾವಾಟ್‌ ವಿದ್ಯುತ್‌ ಪೂರೈಸುವ ಸಾಮರ್ಥ್ಯ ಇಂಧನ ಇಲಾಖೆಗೆ ಇದೆ. ಮಾರ್ಚ್‌ ತಿಂಗಳಲ್ಲಿ ಗರಿಷ್ಠ ಬೇಡಿಕೆ ಪ್ರಮಾಣ 12,000 ಮೆಗಾ ವಾಟ್‌ವರೆಗೂ ತಲುಪಿತ್ತು.

‘ಬೇಸಿಗೆಯಲ್ಲಿ ಮನೆ, ವಾಣಿಜ್ಯ ಸಂಕೀರ್ಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಾನಿಕ್‌ ಪರಿಕರಗಳನ್ನು ಬಳಸುತ್ತಾರೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆಯಿಂದ ಹೆಚ್ಚಾಗಿ ಕೊಳವೆಬಾವಿ ಪಂಪ್‌ಗಳ ಬಳಕೆಯೂ ಹೆಚ್ಚುತ್ತದೆ. ಹೀಗಾಗಿ ಈ ಸಮಯದಲ್ಲಿ ವಿದ್ಯುತ್‌ ಪೂರೈಕೆ ಪ್ರಮಾಣ ಹೆಚ್ಚು ಇರುತ್ತದೆ’ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದರು.

ಯಾವ ವರ್ಷ ಎಷ್ಟು ಪೀಕ್‌ಲೋಡ್‌?
ವರ್ಷ; ಬೇಡಿಕೆ (ಮೆಗಾವಾಟ್‌ಗಳಲ್ಲಿ)
2019: 5,869
2018: 5,206
2017: 4,973
2016: 4,931
2015: 4,639
2014: 4,321
2013: 4,114

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !