ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಪ್‍ಕಾಮ್ಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ತೋಟಗಾರಿಕೆ ಸಚಿವ ನಾರಾಯಣ ಗೌಡ

Last Updated 1 ಏಪ್ರಿಲ್ 2020, 15:40 IST
ಅಕ್ಷರ ಗಾತ್ರ

ಬೆಂಗಳೂರು: 'ಗ್ರಾಹಕರಿಗೆ ಹಣ್ಣು ಮತ್ತು ತರಕಾರಿ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಇದಕ್ಕೆಲ್ಲ ಯಾರು ಹೊಣೆ?' ಎಂದು ತೋಟಗಾರಿಕೆ ಸಚಿವ ನಾರಾಯಣ ಗೌಡ ಅವರು ಹಾಪ್‍ಕಾಮ್ಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ರೈತರಿಂದ ಗ್ರಾಹಕರಿಗೆ ಹಣ್ಣು ತರಕಾರಿ ಪೂರೈಕೆಯಾಗುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬುದವಾರ ನಡೆದ ಸಭೆ ಬಳಿಕ ನಗರದ ವಿವಿಧ ಹಾಪ್‍ಕಾಮ್ಸ್ ಮಳಿಗೆಗಳಿಗೆ ಅವರು ದಿಢೀರ್ ಭೇಟಿ ನೀಡಿದರು. ಮಳಿಗೆಗಳಲ್ಲಿರುವ ಪೂರೈಕೆ ಪ್ರಮಾಣದ ಬಗ್ಗೆ ಪರಿಶೀಲಿಸಿ, ಕೆಲ ಮಳಿಗೆಯಲ್ಲಿ ಸರಿಯಾದ ನಿರ್ವಹಣೆ ಇಲ್ಲದಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು.

'ಲಾಕ್‍ಡೌನ್ ವೇಳೆ ಹಾಪ್‍ಕಾಮ್ಸ್ ಜವಾಬ್ದಾರಿ ಮಹತ್ತರವಾದುದು. ಮಳಿಗೆಗಳಲ್ಲಿ ಕೇವಲ ಮಾರಾಟ ಮಾಡಿದರೆ ಸಾಲದು. ಇಂತಹ ಸಂದರ್ಭದಲ್ಲಿ ಗ್ರಾಹಕರಿಗೆ ಹಣ್ಣು, ತರಕಾರಿ, ಮೊಟ್ಟೆ ಎಲ್ಲವೂ ಸುಲಭವಾಗಿ ಸಿಗುವಂತಾಗಬೇಕು. ನಗರದ ಎಲ್ಲ ಬಡಾವಣೆಗಳಿಗೆ ವಾಹನಗಳಲ್ಲಿ ತೆರಳಿ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಬೇಕು. ರೈತರು ಬೆಳೆದ ಬೆಳೆಯನ್ನು ರಸ್ತೆಬದಿ ಬಿಸಾಡುವಂತಾಗಬಾರದು. ರೈತರಿಂದ ಹಣ್ಣು-ತರಕಾರಿ ಖರೀದಿಸಿ, ಮಳಿಗೆಗಳಲ್ಲಿ ಸಾಕಷ್ಟು ಪೂರೈಕೆ ಇರುವಂತೆ ಎಚ್ಚರ ವಹಿಸಬೇಕು' ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT