ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರು ಅತೃಪ್ತರಾಗಿರಲಿಲ್ಲ, ನೀವೆಲ್ಲ ಸೇರಿ ಅತೃಪ್ತರನ್ನಾಗಿಸಿದಿರಿ: ಸಿದ್ದರಾಮಯ್ಯ

Last Updated 29 ಜುಲೈ 2019, 6:42 IST
ಅಕ್ಷರ ಗಾತ್ರ

ಬೆಂಗಳೂರು:‘ರಾಜೀನಾಮೆ ನೀಡಿರುವ ಶಾಸಕರು ಅತೃಪ್ತರಾಗಿರಲಿಲ್ಲ ನೀವೆಲ್ಲ (ಬಿಜೆಪಿ) ಸೇರಿ ಅವರನ್ನು ಅತೃಪ್ತರನ್ನಾಗಿಸಿದಿರಿ’ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕರಿಸಿದ ನಂತರ ಸಮಾವೇಶಗೊಂಡಿರುವ ಮೊದಲ ಅಧಿವೇಶನವನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿರಬೇಕು ಎಂಬುದು ನಮ್ಮ ಆಶಯ. ಆದರೆ, ಅದು ಸಾಧ್ಯವೇ ಇಲ್ಲ. ಈ ಅತೃಪ್ತರನ್ನು ಕಟ್ಟಿಕೊಂಡು ಸ್ಥಿರ ಸರ್ಕಾರ ನೀಡಲು ನಿಮಗೆ ಸಾಧ್ಯವೇ’ಎಂದು ಪ್ರಶ್ನಿಸಿದರು.

‘ಬಿಜೆಪಿ ಸರ್ಕಾರಕ್ಕೆ ಬಹುಮತವೇ ಇಲ್ಲ. ಅತೃಪ್ತರ ಮೂಲಕ ಸರ್ಕಾರ ರಚನೆ ಮಾಡಿದೆ.ಯಡಿಯೂರಪ್ಪ ಅವರು ಹೋರಾಟಗಾರರು. ಆದರೆ, ಜನಾದೇಶದ ಮೂಲಕ ಅವರು ಎಂದೂ ಸಿಎಂ ಆಗಲೇ ಇಲ್ಲ. ಪ್ರತಿ ಬಾರಿಯೂ ಕೊರತೆಯಿಂದಲೇ ಸರ್ಕಾರ ರಚನೆ ಮಾಡಿದ್ದಾರೆ’ ಎಂದರು.

‘ಯಡಿಯೂರಪ್ಪ ಅವರು ಉತ್ತಮ ಆಡಳಿತ ನೀಡುವುದಾಗಿ ಹೇಳಿದ್ದಾರೆ. ಅದನ್ನು ಸ್ವಾಗತಿಸುತ್ತೇನೆ. ಧ್ವೇಷ ರಾಜಕಾರಣ ಮಾಡುವುದಿಲ್ಲ ಎಂದಿದ್ದಾರೆ ಅದನ್ನೂ ಸ್ವಾಗತಿಸುತ್ತೇನೆ’ ಎಂದು ಹೇಳಿದರು.

‘ಜನ ಸೇವೆ ಮಾಡಲು ಪ್ರಾಮಾಣಿಕವಾಗಿರಬೇಕು. ನನ್ನ ಅವಧಿಯಲ್ಲಿ ನಾನು ಆ ಪ್ರಯತ್ನ ಮಾಡಿದ್ದೇನೆ. ಕುಮಾರಸ್ವಾಮಿಯವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿತ್ತು ಎಂಬ ಆರೋಪಗಳು ಸುಳ್ಳು. ಮೈತ್ರಿ ಸರ್ಕಾರ ಉತ್ತಮವಾಗಿಯೇ ಕೆಲಸ ಮಾಡುತ್ತಿತ್ತು’ ಎಂದರು.

ಸಾಲಮನ್ನಾ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಮೈತ್ರಿ ಸರ್ಕಾರ 14 ತಿಂಗಳು ಜನ ಮೆಚ್ಚಿದ ರೀತಿಯಲ್ಲಿ ಕೆಲಸ ಮಾಡಿದೆ. ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕರಿಸಿದ ನಂತರ ಘೋಷಿಸಿದ ಎರಡೂ ಕಾರ್ಯಕ್ರಮಗಳನ್ನು ಈ ಹಿಂದೆಯೇ ನಾನು ಘೋಷಿಸಿದ್ದೇನೆ.ನನ್ನ ಕೊನೆ ಬಜೆಟ್‌ನಲ್ಲಿ ರೈತರಿಗೆ 10 ಸಾವಿರ ನೀಡುವ ‘ರೈತ ಬೆಳಕು’ ಎನ್ನುವಕಾರ್ಯಕ್ರಮವನ್ನು ನನ್ನ ಕೊನೆಯ ಬಜೆಟ್‌ನಲ್ಲೇ ಪ್ರಕಟಿಸಿದ್ದೆ, ನಾನಾ ಕಾರಣಗಳಿಂದ ಅದು ಆದೇಶವಾಗಿರಲಿಲ್ಲ. ಸರ್ಕಾರ ಇದ್ದಿದ್ದರೆ ಮುಂದಿನ ದಿನಗಳಲ್ಲಿ ಅದು ಜಾರಿಯಾಗುತ್ತಿತ್ತು’ ಎಂದು ಸ್ಪಷ್ಟಪಡಿಸಿದರು.

‘ನೇಕಾರರ ಸಾಲ ಮನ್ನವನ್ನೂ ನನ್ನ ಬಜೆಟ್‌ನಲ್ಲೇ ಘೋಷಿಸಿದ್ದೇನೆ. ಆದಾಗಲೇ ಆದೇಶವು ಆಗಿದೆ. ಮೈತ್ರಿ ಸರ್ಕಾರವೂ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿತ್ತು. ಇದರಲ್ಲಿ ಹೊಸದೇನಿಲ್ಲ. ನಮ್ಮದೇ ಕಾರ್ಯಕ್ರಮವನ್ನು ಬಿಎಸ್‌ವೈ ತಮ್ಮ ಮೊದಲ ನಿರ್ಧಾರ ಎಂಬಂತೆ ಪ್ರಕಟಿಸಿದ್ದಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT