ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಟ್ರಸ್ಟ್‌ನ ನಯಾ ಪೈಸೆ ತಿಂದಿದ್ದರೆ ಜೈಲಿಗೆ ಹಾಕಿ: ಬಸವರಾಜ ಹೊರಟ್ಟಿ

Last Updated 30 ಅಕ್ಟೋಬರ್ 2018, 10:28 IST
ಅಕ್ಷರ ಗಾತ್ರ

ಧಾರವಾಡ: ‘ಸರ್ವೋದಯ ಶಿಕ್ಷಣ ಟ್ರಸ್ಟ್‌ನ ನಯಾ ಪೈಸೆಯನ್ನು ತಿಂದ್ದಿದ್ದರೆ ನಮ್ಮನ್ನು ಜೈಲಿಗೆ ಹಾಕಿ ಎಂದು ಬಾಂಡ್ ಪೇಪರ್‌ನಲ್ಲಿ ಬರೆದು ಕೊಡುತ್ತೇವೆ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಸರ್ವೋದಯ ಶಿಕ್ಷಣ ಟ್ರಸ್ಟ್ ಆಸ್ತಿಯನ್ನು ತಾವು ಕಬಳಿಸಿರುವುದಾಗಿ ರಾಜನಹಳ್ಳಿ ವಾಲ್ಮೀಕಿ ಮಹಾಸಂಸ್ಥಾನ ಪೀಠದ ಅಧ್ಯಕ್ಷ ಪ್ರಸನ್ನಾನಂದ ಸ್ವಾಮೀಜಿ ಹಾಗೂ ಸಚಿವ ರಮೇಶ ಜಾರಕಿಹೊಳಿ ಅವರು ಆರೋಪ ಮಾಡಿರುವ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಏನೇ ಹೇಳಿಕೆ ನೀಡಬೇಕಾದರೂ ವಿಚಾರ ಮಾಡಿ ನೀಡಬೇಕಾಗುತ್ತದೆ’ ಎಂದು ತಿರುಗೇಟು ನೀಡಿದರು.

‘ಯಾರಾದರೂ ಟ್ರಸ್ಟಿನ್ ಆಸ್ತಿ ಕಬಳಿಸಿದ್ದರೆ ಕಾನೂನು ಕ್ರಮ ಕೈಗೊಳ್ಳಲಿ. ಟ್ರಸ್ಟ್ ಅಧ್ಯಕ್ಷನಾದ ಬಳಿಕ ₹74 ಲಕ್ಟದಷ್ಟು ಕೆಲಸ ಮಾಡಿಸಿದ್ದೇನೆ. 2009 ರಲ್ಲಿ ಟ್ರಸ್ಟ್‌ನ ನೋದಂಣಿ ಮಾಡಿಸಲಾಗಿದೆ. ತಮ್ಮ ವಿರುದ್ಧದ ಪ್ರಕರಣಗಳು ತಿರಸ್ಕೃತವಾಗಿವೆ. ತಾವು ಸಚಿವನಾಗಿದ್ದಾಗ ಉಳ್ಳಾಗಡ್ಡಿ ಎಂಬುವವರಿಗೆ ಬಿಟ್ಟು ಕೊಟ್ಟಿದ್ದೆ’ ಎಂದು ಹೇಳಿದರು.

‘ಸಭಾಪತಿ ಆದ ಬಳಿಕವೂ ಅಧ್ಯಕ್ಷ ಸ್ಥಾನ ಬಿಟ್ಟು ಕೊಟ್ಟಿದ್ದೇನೆ. ಟ್ರಸ್ಟ್‌ನ ಒಂದು ನಯಾ ಪೈಸೆ ಆಸ್ತಿ ಕಬಳಿಸಿದ್ದರೇ ಜೈಲಿಗೆ ಕಳುಹಿಸಲಿ. ಪ್ರಸನ್ನಾನಂದ ಸ್ವಾಮೀಜಿ‌ ಮತ್ತು ರಮೇಶ ಜಾರಕಿಹೊಳಿ ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ನ್ಯಾಯಾಲಯಕ್ಕೆ ಹೋದವರು ನಾವಲ್ಲ, ಬದಲಿಗೆ ಅವರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿ ಅವರು ಸಿದ್ದರಾಮಯ್ಯ ಅವರ ಮಗನ ಸಾವಿನ ವಿಚಾರದಲ್ಲಿ ಹೇಳಿಕೆ ನೀಡಿರುವುದು ಸರಿಯಲ್ಲ. ಈ ಹುದ್ದೆಯಲ್ಲಿದ್ದು ರಾಜಕೀಯದ ಕುರಿತು ಈ ವೇಳೆ ಏನನ್ನು ಮಾತನಾಡಲಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT