ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಎಮ್ಮೆ ಸಾಗಾಣಿಕೆ, ವ್ಯಕ್ತಿಗೆ ಥಳಿತ

Last Updated 1 ಜೂನ್ 2019, 19:32 IST
ಅಕ್ಷರ ಗಾತ್ರ

ಧಾರವಾಡ: ಬಾಗಲಕೋಟೆ ಕಡೆಯಿಂದ ಹುಬ್ಬಳ್ಳಿ ಕಡೆಗೆ ರಾಸುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್‌ಗಳನ್ನು ಗ್ರಾಮಸ್ಥರು ತಡೆದು, ಕ್ಯಾಂಟರ್‌ನಲ್ಲಿದ್ದ ವ್ಯಕ್ತಿಯನ್ನು ಥಳಿಸಿದ್ದಾರೆ.

ಕ್ಯಾಂಟರ್‌ನಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದರು ಎಂದುಧಾರವಾಡದ ನರೇಂದ್ರ ಗ್ರಾಮಸ್ಥರು ವ್ಯಕ್ತಿಯನ್ನು ಕ್ಯಾಂಟರ್‌ ಜೊತೆಯಲ್ಲಿ ಸಜೀವ ದಹನ ಮಾಡುವ ಬೆದರಿಕೆಯೂ ಒಡ್ಡಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ, ಉದ್ರಿಕ್ತ ಜನರನ್ನು ಚದುರಿಸಿದ್ದಾರೆ.

ಗೋವಾ ಮೂಲದ ಎರಡು ಕ್ಯಾಂಟರ್‌ಗಳಲ್ಲಿ ಹಸು, ಹೋರಿ ಹಾಗೂ ಎಮ್ಮೆಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದ ಶ್ರೀರಾಮಸೇನೆ, ಭಜರಂಗದಳ ಹಾಗೂ ನರೇಂದ್ರ ಗ್ರಾಮಸ್ಥರು ವಾಹನಗಳಿಗೆ ಕಲ್ಲುತೂರಿ ರಸ್ತೆಯಲ್ಲೇ ತಡೆದು ನಿಲ್ಲಿಸಿದ್ದಾರೆ. ವಾಹನದಲ್ಲಿದ್ದ ಮೂವರು ಪರಾರಿಯಾಗಿದ್ದು, ಸದ್ದಾಂ ಎಂಬ ವ್ಯಕ್ತಿಗೆ ಸ್ಥಳೀಯರು ಥಳಿಸಿದ್ದಾರೆ. ವಾಹನದಲ್ಲಿದ್ದ ಹಸು, ಎಮ್ಮೆಗಳನ್ನು ಬಿಡುಗಡೆ ಮಾಡಿ, 10–12ಹಸುಗಳನ್ನು ಗ್ರಾಮಸ್ಥರೇ ಹೊಡೆದುಕೊಂಡು ಹೋಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ. 12 ಎಮ್ಮೆ, ಎರಡು ಹಸು, ಒಂದು ಹೋರಿಯನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ರಾಸುಗಳನ್ನು ಹುಡುಕಲಾಗುತ್ತಿದೆ. ಈ ವರೆಗೆ ಈ ಬಗ್ಗೆ ಯಾರೂ ದೂರು ದಾಖಲಿಸಿಲ್ಲ. ಸದ್ದಾಂನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT