ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ & ಬಿ.ಆರ್.ಅಂಬೇಡ್ಕರ್: ಸಮಗ್ರ ರಾಷ್ಟ್ರಾಭಿವೃದ್ಧಿ | ವಿಚಾರ ಸಂಕಿರಣ ನಾಳೆ

Last Updated 30 ಆಗಸ್ಟ್ 2019, 5:04 IST
ಅಕ್ಷರ ಗಾತ್ರ

ಬಳ್ಳಾರಿ: ‘ಸಂವಿಧಾನ ಮತ್ತು ಬಿ.ಆರ್.ಅಂಬೇಡ್ಕರ್: ಸಮಗ್ರ ರಾಷ್ಟ್ರಾಭಿವೃದ್ಧಿ’ ಕುರಿತು ನಗರದಲ್ಲಿ ಸೆಪ್ಟೆಂಬರ್ 1 ರಂದುವಿಚಾರ ಸಂಕಿರಣ ನಡೆಯಲಿದೆ ಎಂದು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ಶಿವಕುಮಾರ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕ್ರೀಡಾಂಗಣ ಸಂಕೀರ್ಣದ ಸಭಾಂಗಣದಲ್ಲಿ ಬಳ್ಳಾರಿ ಐಜಿಪಿ ಎಂ.ನಂಜುಂಡಸ್ವಾಮಿ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ಅಕಾಡೆಮಿ ಅಧ್ಯಕ್ಷ ಚೆಲುವರಾಜು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ನಂತರ, ಸಂವಿಧಾನ- ರಾಷ್ಟ್ರಾಭಿವೃದ್ಧಿ ಕುರಿತು ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಆರ್.ಮೋಹನ ರಾಜ್, ಸಂವಿಧಾನ- ಮಹಿಳಾ ಸಬಲೀಕರಣ ‌ಕುರಿತು ಅಕಾಡೆಮಿ ಉಪಾಧ್ಯಕ್ಷೆ ಎನ್.ಡಿ.ವೆಂಕಮ್ಮ, ಸಂವಿಧಾನ- ಜನಸಾಮಾನ್ಯರ ಕುರಿತು ಲೇಖಕ ವೆಂಕಟಗಿರಿ ದಳವಾಯಿ ಉಪನ್ಯಾಸ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಂಜೆ‌ ನಡೆಯಲಿರುವ‌ ಸಮಾರೋಪದಲ್ಲಿ ಅಕಾಡೆಮಿಯ ರಾಷ್ಟ್ರೀಯ ಕಾರ್ಯದರ್ಶಿ ಸುಭಾಷ್ ಎಚ್.‌ಕಾನಡೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಲೇಖಕ ಅಪ್ಪಗೆರೆ‌ ವೆಂಕಟಯ್ಯ ಮತ್ತು ವೆಂಕಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT