ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ–2 ನೌಕೆ ಚಂದ್ರನಿಗೆ ಇನ್ನಷ್ಟು ಸನಿಹ: ಇಸ್ರೋ

Last Updated 2 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ‘ಚಂದ್ರಯಾನ–2’ ಚಂದ್ರನ ಅಂಗಳಕ್ಕೆ ತಲುಪುವಲ್ಲಿ ಶುಕ್ರವಾರ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ.

ಲ್ಯಾಂಡರ್‌ ಮತ್ತು ರೋವರ್‌ ಅನ್ನು ಹೊತ್ತಿರುವ ಬಾಹ್ಯಾಕಾಶ ನೌಕೆ ‘ಬಾಹುಬಲಿ’ಯನ್ನು ಮತ್ತೊಂದು ಹಂತದ ಕಕ್ಷೆಗೆ ಯಶಸ್ವಿಯಾಗಿ ಏರಿಸಲಾಗಿದೆ. ಇದರಿಂದ ನೌಕೆಯು ಚಂದ್ರನಿಗೆ ಇನ್ನಷ್ಟು ಸನಿಹವಾಗಿದೆ. ಈ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಇಸ್ರೊ ಟ್ವಿಟ್‌ ಮಾಡಿದೆ.

ಶುಕ್ರವಾರ ಮಧ್ಯಾಹ್ನ 3.27 ಕ್ಕೆ ಸರಿಯಾಗಿ 646 ಸೆಕೆಂಡುಗಳ ಕಾಲ ಎಂಜಿನ್‌ ಆನ್‌ ಮಾಡಿ ನೌಕೆಯನ್ನು ಮುಂದೂಡುವ ಮೂಲಕ ನಾಲ್ಕನೇ ಬಾರಿ ಕಕ್ಷೆಯನ್ನು ಹೆಚ್ಚಿಸುವ ಕಾರ್ಯ ನಡೆಯಿತು. ಭೂಮಿಯಿಂದ 277 x 89,472 ಕಿ.ಮೀ ದೂರಕ್ಕೆ ಸಾಗಿದೆ. ಬಾಹ್ಯಾಕಾಶ ನೌಕೆ ಸುಸ್ಥಿತಿಯಲ್ಲಿದೆ ಎಂದು ಇಸ್ರೊ ತಿಳಿಸಿದೆ.

ಜುಲೈ 22 ರಂದು ಚಂದ್ರಯಾನ–2 ನೌಕೆಯನ್ನು ಶ್ರೀಹರಿಕೋಟದಿಂದ ಉಡಾವಣೆ ಮಾಡಲಾಗಿತ್ತು. ಸೆಪ್ಟಂಬರ್‌ 7 ರಂದು ಚಂದ್ರನ ಮೇಲ್ಮೈ ತಲುಪಲಿದೆ. ಆಗಸ್ಟ್‌ 20 ರಂದು ಭೂಕಕ್ಷೆಯಿಂದ ಚಂದ್ರನ ಕಕ್ಷೆಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯಲಿದೆ.

ನೌಕೆ ಚಂದ್ರನ ಕಕ್ಷೆ ಸೇರುತ್ತಿದಂತೆ ಮಹತ್ವದ ಚಟುವಟಿಕೆಗಳು ಆರಂಭಗೊಳ್ಳಲಿವೆ. ಇದು ಅತ್ಯಂತ ಕುತೂಹಲದ ವಿದ್ಯಮಾನ ಎಂದು ಇಸ್ರೋ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT