ಬೆಂಗಳೂರು:ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಜಪಾನಿನ ಪುಟಾಣಿಗಳು, ಜಪಾನಿ ಕತೆಗಳ ಪಾತ್ರಗಳಲ್ಲಿ ಕಾಣಿಸಿಕೊಂಡ ಮಕ್ಕಳು, ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಉದ್ಯಮಿಗಳು, ಮಹಿಳೆಯರು, ಗಮನ ಸೆಳೆದ ಬಾಲಿವುಡ್ ನೃತ್ಯ..

ನಗರದ ಐಐಎಸ್‌ಸಿಯ ಜೆ.ಎನ್. ಟಾಟಾ ಸಭಾಂಗಣದಲ್ಲಿ ಭಾನುವಾರ ಜರುಗಿದ ‘ಜಪಾನ್ ಹಬ್ಬ’ದಲ್ಲಿ ಕಂಡ ದೃಶ್ಯಗಳಿವು. ಜಪಾನ್ ಸಂಸ್ಕೃತಿ ಬಿಂಬಿಸುವ ಕರಕುಶಲ ವಸ್ತುಗಳು ಮತ್ತು ವಿಭಿನ್ನ ವಿನ್ಯಾಸದ ಉಡುಗೆಗಳಿದ್ದ 36 ಮಳಿಗೆಗಳನ್ನು ಉತ್ಸವದಲ್ಲಿ ಹಾಕಲಾಗಿತ್ತು. ಈ ಪೈಕಿ, ಶೇ 75ರಷ್ಟು ಜಪಾನಿಯರ ಮಳಿಗೆಗಳೇ ಇದ್ದವು. ಸುಮಾರು 3,500ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

‘ಭಾರತ ಮತ್ತು ಜಪಾನ್ ನಡುವಿನ ಸಂಪರ್ಕ ಸೇತುವೆಯಾಗಿ 16 ವರ್ಷಗಳಿಂದ ಈ ಹಬ್ಬ ಆಚರಿಸಲಾಗುತ್ತಿದೆ. ಜಪಾನ್ ಸಂಸ್ಕೃತಿ ಬಗ್ಗೆ ಭಾರತೀಯರಿಗೆ ಪರಿಚಯಿಸುವುದು, ಉಭಯ ದೇಶಗಳ ವಿಭಿನ್ನ ಸಂಸ್ಕೃತಿಯನ್ನು ಅನಾವರಣಗೊಳಸುವುದು ಈ ಉತ್ಸವದ ಉದ್ದೇಶ’ ಎಂದು ಜಪಾನ್ ಹಬ್ಬ ಸಂಘಟನಾ ಸಮಿತಿಯ ಮುಖ್ಯಸ್ಥೆ ಎ. ಶ್ರೀವಿದ್ಯಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.