ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ: ಕೇವಲ 62 ಮಂದಿಯಿಂದ 426 ಮಂದಿಗೆ ಕೋವಿಡ್ ಸೋಂಕು!

Last Updated 6 ಮೇ 2020, 7:16 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದಲ್ಲಿ ಕೇವಲ 62 ಮಂದಿಯಿಂದ 426 ಮಂದಿಗೆ ಕೋವಿಡ್-19 ರೋಗ ಹರಡಿದೆ. ಅಂದರೆ ಒಬ್ಬ ಕೋವಿಡ್ ರೋಗಿಯಿಂದ 6.87 ಜನರಿಗೆ ರೋಗ ಹರಡಿದೆ.

ಮಂಗಳವಾರ ರಾತ್ರಿ ರಾಜ್ಯ ಕೋವಿಡ್ ವಾರ್ ರೂಂನಿಂದ ಪ್ರಕಟಿಸಿದ ಮಾಹಿತಿ ಪ್ರಕಾರ, 62 ರೋಗಿಗಳ ಪೈಕಿ 29 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆ (SARI) ಅಥವಾ ಐಎಲ್‌ಐ (ಶೀತಜ್ವರ ಮಾದರಿಯ ಅನಾರೋಗ್ಯ) ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಕೋವಿಡ್ ರೋಗಿಗಳೆಂದು ಗುರುತಿಸಲಾಗಿತ್ತು.

18 ಮಂದಿ ದೇಶದ ವಿವಿದೆಡೆಪ್ರಯಾಣ ಮಾಡಿ ಬಂದವರಾಗಿದ್ದರು.ಹೆಚ್ಚಿನವರು ತಬ್ಲೀಗಿ ಜಮಾತ್ ಸಭೆಯಲ್ಲಿ ಭಾಗವಹಿಸಿದವರಾಗಿದ್ದರು.18ರಲ್ಲಿ 15 ಮಂದಿ ದೆಹಲಿಗೆ ಹೋಗಿ ಬಂದವರಾಗಿದ್ದು ಇವರಿಂದ 100 ಮಂದಿಗೆ ಸೋಂಕು ಹರಡಿದೆ.ಇನ್ನುಳಿದ ಮೂವರು ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸಿ ಬಂದವರಾಗಿದ್ದು 11 ಮಂದಿಗೆ ಸೋಂಕು ಹರಡಲು ಕಾರಣರಾಗಿದ್ದಾರೆ.

ಪ್ರಕರಣ ಸಂಖ್ಯೆ 128, 20ರ ಹರೆಯದ ರೋಗಿ ಬೆಳಗಾವಿ ಮೂಲದವರಾಗಿದ್ದು ಮಾರ್ಚ್ 13ರಿಂದ 18ರವರೆಗೆ ನಡೆದ ತಬ್ಲೀಗಿ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವ್ಯಕ್ತಿಯಿಂದ 36 ಮಂದಿಗೆ ಸೋಂಕು ಹರಡಿದೆ. ಸೋಂಕು ತಗುಲಿದವರಲ್ಲಿ 15 ಮಂದಿ ಕರ್ನಾಟಕದವರಾಗಿದ್ದಾರೆ. ತಬ್ಲೀಗಿ ಜಮಾತ್ ಸಭೆಯಲ್ಲಿ ಭಾಗವಹಿಸಿದ ಕಿರಿಯ ವ್ಯಕ್ತಿಯಾಗಿರುವ ಈತನಿಂದ ಹಲವಾರು ಮಂದಿಗೆ ಸೋಂಕು ಹರಡಿದೆ.

ವಿದೇಶದಿಂದ ಬಂದ 15 ಮಂದಿಯಿಂದ 34 ಮಂದಿಗೆ ಸೋಂಕು ಹರಡಿದೆ, ವರದಿಯ ಪ್ರಕಾರ ವಿದೇಶಿಯರಿಂದ ಹೆಚ್ಚಿನವರಿಗೆ ಸೋಂಕು ಹರಡಿಲ್ಲ ಮತ್ತು ಸೋಂಕು ಹರಡುವಿಕೆ ನಿಯಂತ್ರಣದಲ್ಲಿತ್ತು. ಆದರೆ ಅವರ ಕುಟುಂಬದವರಿಗೆ ಸೋಂಕು ಹರಡುವ ಸಾಧ್ಯತೆ ಜಾಸ್ತಿ ಇದೆ.
ಮಂಗಳವಾರದ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ 1,320 ಮಂದಿಗೆ ಸೋಂಕು ತಗುಲಿದ್ದು, ರೋಗಿಗಳ ಒಡನಾಡಿಗಳಿಗೆ ತಗುಲಿರುವ ಸೋಂಕು ಪ್ರಕರಣಗಳ ಸಂಖ್ಯೆ 4,778 ಆಗಿದೆ.

ಸೋಂಕು ಹೇಗೆ ಹರಡುತ್ತದೆ?
ರೋಗಿಯಿಂದ ಅವರ ಕುಟುಂಬಗಳಿಗೆ ಸೋಂಕು ಹರಡುವುದು ಒಂದು ರೀತಿಯದ್ದಾದರೆ, ರೋಗಿಯು ಸೋಂಕುವಾಹಕವಾಗಿ ಅವರೊಂದಿಗೆ ಸಂಪರ್ಕಕ್ಕೆ ಬಂದ ಇತರ ವ್ಯಕ್ತಿಗಳಿಗೂ ಈ ಸೋಂಕು ಹರಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT