ಗುರುವಾರ , ಜನವರಿ 23, 2020
20 °C

ಕಾಗವಾಡದಲ್ಲಿ ಬಿಜೆಪಿಗೆ ಗೆಲುವು: ಶ್ರೀಮಂತ ಪಾಟೀಲ್‌ ಮತ್ತೆ ಕಮಾಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಬೆಳಗಾವಿಯ ಕಾಗವಾಡದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಜಯ ಸಾಧಿಸಿದ್ದಾರೆ.

ಇಲ್ಲಿನ ಮತ ಎಣಿಕೆ ಕೇಂದ್ರದ ಆವರಣದಲ್ಲಿ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು  ಶ್ರೀಮಂತ ಪಾಟೀಲ ಪುತ್ರ ಶ್ರೀನಿವಾಸ ಪಾಟೀಲ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಘೋಷಣೆ ಕೂಗುವ ಮೂಲಕ ಸಂಭ್ರಮ ಆಚರಿಸಿದರು.

ಇದನ್ನೂ ಓದಿ: ಕಾಗವಾಡ ಅಖಾಡದಲ್ಲೊಂದು ಸುತ್ತು| ‘ಅದಲು–ಬದಲು’ ಗೆಲ್ಲೋರ‍್ಯಾರು?

ಶ್ರೀಮಂತ ಪಾಟೀಲ ಅವರು 18020 ಮತಗಳ  ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ಕ್ಷೇತ್ರದ ಅಭ್ಯರ್ಥಿ ರಾಜು ಕಾಗೆ ಅವರು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿದ್ದಾರೆ. ಈ ಹಿಂದೆ ಅವರು ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. 

ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ 18020 ಮತಗಳ ಅಂತರದಿಂದ  ಭರ್ಜರಿ ಗೆಲುವು ಸಾಧಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ರಾಜು ಕಾಗೆ  58547 ಮತಗಳನ್ನು ಪಡೆದು ಸೋಲುಕಂಡರು. 

ಶ್ರೀಮಂತ ಪಾಟೀಲ್ ಒಟ್ಟು 76557 ಮತಗಳನ್ನು ಪಡೆದಿದ್ದಾರೆ.

2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ  ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್‌– ಶ್ರೀಮಂತ ಪಾಟೀಲ್‌  82819 ಮತಗಳನ್ನು ಪಡೆದು ಜಯ ಸಾಧಿಸಿದ್ದರು. ಬಿಜೆಪಿಯ ರಾಜು ಕಾಗೆ  49896 ಮತಗಳನ್ನು ಪಡೆದಿದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು