ಸೋಮವಾರ, ನವೆಂಬರ್ 18, 2019
27 °C
ಬಿಎಸ್‌ವೈ ಘೋಷಣೆ

ಕಲಬುರ್ಗಿಯಲ್ಲಿ 20 ಎಕರೆ ವಿಸ್ತಾರದಲ್ಲಿ ಅನುಭವ ‌ಮಂಟಪ ನಿರ್ಮಾಣಕ್ಕೆ ₹20‌ ಕೋಟಿ

Published:
Updated:

ಕಲಬುರ್ಗಿ: 12ನೇ ಶತಮಾನದಲ್ಲಿ ಬಸವಣ್ಣನವರು ಕಟ್ಟಿದ ಅನುಭವ ಮಂಟಪದ ಮಾದರಿಯಲ್ಲಿ ಕಲಬುರ್ಗಿಯಲ್ಲಿ 20 ಎಕರೆ ಜಾಗದಲ್ಲಿ ಅನುಭವ ಮಂಟಪ ನಿರ್ಮಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು.

ಕಲ್ಯಾಣ ‌ಕರ್ನಾಟಕವನ್ನಾಗಿ ಘೋಷಿಸಿದ್ದಕ್ಕಾಗಿ ಈ ಭಾಗದ ಮಠಾಧೀಶರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ‌ಮಾತನಾಡಿದ ಅವರು, ಮೊದಲ ಹಂತದಲ್ಲಿ 15 ದಿನದೊಳಗಾಗಿ ₹20 ಕೋಟಿ ಬಿಡುಗಡೆ ‌ಮಾಡಲಾಗುವುದು ಎಂದರು.

LIVE: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ 

ಇದಕ್ಕೂ ಮುನ್ನ ಮಠಾಧೀಶರು ಅನುಭವ ಮಂಟಪ ನಿರ್ಮಾಣದ ಬೇಡಿಕೆ ಇಟ್ಟಿದ್ದರು. 

ಅಲ್ಲದೇ ವೀರಶೈವ ಸಮಾಜದ ವತಿಯಿಂದ ಕಲಬುರ್ಗಿಯಲ್ಲಿ ವಸತಿನಿಲಯ ನಿರ್ಮಿಸಲು ₹1 ಕೋಟಿ ನೀಡಲಾಗುವುದು ಎಂದು ಘೋಷಿಸಿದರು.

ನಂತರ ಮಾತನಾಡಿದ ಮುಖ್ಯಮಂತ್ರಿ, ನನಗೆ ಮನುಷ್ಯ ಕುಲವೇ ಜಾತಿ. ವರ್ಗ, ವರ್ಣ, ಲಿಂಗ ಭೇದವಿಲ್ಲದೇ ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಘೋಷಿಸಿದರು.

ಇದನ್ನೂ ಓದಿ: ಬೀದರ್‌: ‘ಕಲ್ಯಾಣ ಕರ್ನಾಟಕ ಉತ್ಸವ’ದಲ್ಲಿ ಸಚಿವರ ಭಾಷಣದ ಎಡವಟ್ಟು 

ಇದಕ್ಕೂ ಮುನ್ನ ಮಾತನಾಡಿದ ಹಲವು‌ ಮಠಾಧೀಶರು, ಕಲ್ಯಾಣ ಕರ್ನಾಟಕ ಎಂದು ನಾಮಕರಣ ‌ಮಾಡಿದ ಯಡಿಯೂರಪ್ಪ ‌ಆಧುನಿಕ ಬಸವಣ್ಣ ಎಂದು ಬಣ್ಣಿಸಿದರು.

ಕೆಲ ಮಠಾಧೀಶರು ಹೈದರಾಬಾದ್ ನಿಜಾಮನಿಂದ ವಿಮೋಚನೆ ಮಾಡಿದ ಸರ್ದಾರ್ ಪಟೇಲರಂತೆ ಯಡಿಯೂರಪ್ಪ ಆಧುನಿಕ ಸರ್ದಾರ್ ಪಟೇಲ್ ಎಂದು ಹೊಗಳಿದರು.

ಇದನ್ನೂ ಓದಿ: ಕಲ್ಯಾಣ ಕರ್ನಾಟಕ: ಹೆಸರಷ್ಟೇ ಸಾಕೆ?

ಪ್ರತಿಕ್ರಿಯಿಸಿ (+)