ಗುರುವಾರ , ಸೆಪ್ಟೆಂಬರ್ 19, 2019
°C

ನೆರೆ ಹಾವಳಿ ಇದ್ದಾಗ ಫೋನ್ ಕದ್ದಾಲಿಕೆಗೆ ಅನಗತ್ಯ ಮಹತ್ವ: ದೇವೇಗೌಡ ಆಕ್ಷೇಪ

Published:
Updated:

ಬೆಂಗಳೂರು: ರಾಜ್ಯದಲ್ಲಿ ಭಾರಿ ನೆರೆ ಹಾವಳಿ ಇರುವಾಗ ಫೋನ್ ಕದ್ದಾಲಿಕೆ ಕುರಿತು ಅನಗತ್ಯ ಮಹತ್ವ ನೀಡಲಾಗಿದೆ. ಈ ಮೂಲಕ ನೆರೆ ಪರಿಹಾರ ಕಾರ್ಯವನ್ನು ಕಡೆಗಣಿಸಲಾಗುತ್ತಿದೆ ಎಂದು ಜೆಡುಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಕೇಂದ್ರ ಸರ್ಕಾರದ ನಾಯಕರ ಸೂಚನೆಯಂತೆ ಯಡಿಯೂರಪ್ಪ ಅವರು ಸಿಬಿಐ ತನಿಖೆಗೆ ಆದೇಶಿಸಿಲ್ಲ. ಇದೇನಿದ್ದರೂ ಇಲ್ಲೇ ಸಿದ್ಧವಾದ ತಂತ್ರ ಎಂದು ಅವರು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು

ಈ ಹಿಂದೆ ಯಡಿಯೂರಪ್ಪ ವಿರುದ್ಧ ಬಂದ ಟೇಪ್ ಹಗರಣವನ್ನು ಕುಮಾರಸ್ವಾಮಿ ತನಿಖೆಗೆ ಒಳಪಡಿಸಲಿಲ್ಲ. ಆದರೆ ಯಡಿಯೂರಪ್ಪ ಇದೀಗ ಸಿಬಿಐ ತನಿಖೆಗೆ ಆದೇಶಿಸುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಆರೋಪಿಸಿದರು.

Post Comments (+)