ಭಾನುವಾರ, ಏಪ್ರಿಲ್ 18, 2021
33 °C

ದಿನದ ಅಂತ್ಯದೊಳಗೆ ವಿಶ್ವಾಸ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯಪಾಲರಿಂದ ಸಂದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಇವತ್ತೇ ದಿನದ ಅಂತ್ಯದೊಳಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸಿ’ ಎಂದು ರಾಜ್ಯಪಾಲರು ಸಂದೇಶ ಕಳುಹಿಸಿದ್ದಾರೆ ಎಂದು ಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್ ಸದನಕ್ಕೆ ಓದಿ ತಿಳಿಸಿದರು.

ಮಧ್ಯಾಹ್ನ ಊಟದ ವಿರಾಮ ವೇಳೆಯಲ್ಲಿ 3ಗಂಟೆ ವರೆಗೆ ಕಲಾಪ ಮುಂದೂಡಿದ್ದ ವೇಳೆ ಬಿಜೆಪಿಯ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿತ್ತು.

ಇದೇ ದಿನದ ಒಳಗೆ ವಿಶ್ವಾಸಮತ ಸಾಬೀತುಪಡಿಸಿ ಸದನದ ಗೌರವ ಉಳಿಸಿಕೊಳ್ಳಬೇಕು ಎಂದು ರಾಜ್ಯಪಾಲರು ಸಲಹೆ ನೀಡಿದ್ದಾರೆ.‌

‘ಸದನದ ಸದಸ್ಯರ ಹಕ್ಕು ರಕ್ಷಿಸುವ ಸಲುವಾಗಿ, ಅವರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಬೇಕು. ಇಲ್ಲಿ ಅವಕಾಶ ಸಿಗದೆ ಹೋದರೆ, ಸದಸ್ಯನಾಗಿ ಉಳಿಯಬೇಕೆ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ರಾಜ್ಯಪಾಲರು ಈ ಸಂದೇಶ ರವಾನಿಸಿದ್ದರೂ ಸದಸ್ಯರ ಮಾತಿಗೆ ಅವಕಾಶ ನೀಡಬೇಕು. ಸದಸ್ಯರು ಕಾಣೆಯಾಗುತ್ತಿರುವ ಬಗ್ಗೆ ತಿಳಿಯುತ್ತಿಲ್ಲ ಎಂದು ಶಾಸಕ ಕೃಷ್ಣ ಬೈರೇಗೌಡ ಆಗ್ರಹಿಸಿದರು.

* ಇದನ್ನೂ ಓದಿ...

ಶ್ರೀಮಂತ ಪಾಟೀಲ್‌ ಅಪಹರಣ: ಡಿಕೆಶಿ; ವರದಿ ಸಲ್ಲಿಸಲು ಗೃಹ ಸಚಿವಗೆ ಸ್ಪೀಕರ್‌ ಸೂಚನೆ

* Live | ಇವತ್ತೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸಿ: ರಾಜ್ಯಪಾಲರ ಸಂದೇಶ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು