ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ಆಯುರ್ವೇದ ಚಿಕಿತ್ಸೆಗೆ ಸರ್ಕಾರ ಸಮ್ಮತಿ; 10 ರೋಗಿಗಳಿಗೆ ಔಷಧ

Last Updated 15 ಏಪ್ರಿಲ್ 2020, 6:46 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ -19 ರೋಗಿಗಳಿಗೆ ಆಯುರ್ವೇದ ಚಿಕಿತ್ಸೆ ಆರಂಭಿಸುವುದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆಸೂಚಿಸಿದೆ.

ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಿರಿಯ ವೈದ್ಯ ಡಾ.ಗಿರಿಧರ ಕಜೆ ಅವರನ್ನು ತಮ್ಮ ಕಾವೇರಿ ನಿವಾಸಕ್ಕೆ ಕರೆಸಿಕೊಂಡು ಈ ವಿಷಯ ತಿಳಿಸಿದರು.

‘ಆರಂಭದಲ್ಲಿ ಹತ್ತು ಮಂದಿ ರೋಗಿಗಳಿಗೆ ಕೋವಿಡ್ ಆಸ್ಪತ್ರೆಯಲ್ಲೇ ಆಯುರ್ವೇದ ಗುಳಿಗೆ ನೀಡಲಾಗುವುದು, ಅದರ ಫಲಿತಾಂಶ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ಎಂದು ಗಿರಿಧರ ಕಜೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಸರ್ಕಾರದಿಂದ ಅಧಿಕೃತ ಆದೇಶ ಬಂದ ತಕ್ಷಣ ಈ ಔಷಧ ಪ್ರಯೋಗ ಆರಂಭವಾಗಲಿದೆ. ಬಹುಶಃ ಎರಡು, ಮೂರು ದಿನಗಳಲ್ಲಿ ಇದು ಆರಂಭವಾಗಬಹುದು, ಏನಿದ್ದರೂ ಸರ್ಕಾರ ಏನು ಸೂಚಿಸುತ್ತದೆಯೋ ಅದರಂತೆ ನಡೆಯಲಾಗುವುದು ಎಂದುಹೇಳಿದರು.

‘ನಾನು ಪ್ರಚಾರಕ್ಕಾಗಿ ಈ ಕೆಲಸ ಮಾಡಿಲ್ಲ, ಆಯುಷ್ ಇಲಾಖೆಯಿಂದ ನನಗೆ ನೋಟಿಸ್ ಬಂದಿಲ್ಲ, ರಾಜ್ಯ ಸರ್ಕಾರದ ಮೂಲಕ ಐಸಿಎಂಆರ್‌ಗೆ ಪ್ರಸ್ತಾವನೆ ಕಳುಹಿಸಲಾಗಲಾಗಿತ್ತು’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT