ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಟೇಶಮೂರ್ತಿ, ವಿವೇಕ ರೈ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ

Last Updated 7 ಫೆಬ್ರುವರಿ 2019, 17:46 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾಹಿತ್ಯಕ್ಕೆ ನೀಡಿದ ಗಮನಾರ್ಹ ಕೊಡುಗೆ ಪರಿಗಣಿಸಿ ಸಾಹಿತಿಗಳಾದ ಬಿ.ಎ.ವಿವೇಕ ರೈ, ಎಚ್‌.ಎಸ್‌.ವೆಂಕಟೇಶಮೂರ್ತಿ, ದೇಶಾಂಶ ಹುಡಗಿ, ಸಾಯಿಸುತೆ ಮತ್ತು ಎ.ಕೆ.ಹಂಪಣ್ಣ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು ‘2018ನೇ ಸಾಲಿನ ಗೌರವ ಪ್ರಶಸ್ತಿ’ಗೆ ಆಯ್ಕೆ ಮಾಡಿದೆ.

ಪ್ರಶಸ್ತಿಯು ತಲಾ ₹ 50 ಸಾವಿರ ಒಳಗೊಂಡಿದೆ. ಸಾಹಿತ್ಯ ಕೃಷಿಯನ್ನು ಪರಿಗಣಿಸಿ 10 ಸಾಹಿತಿಗಳನ್ನು ‘2018ನೇ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ಇದು ತಲಾ ₹ 25 ಸಾವಿರ ಒಳಗೊಂಡಿದೆ.

2017ನೇ ಸಾಲಿನ ಪುಸ್ತಕ ಬಹುಮಾನ, 2017ನೇ ಸಾಲಿನ ದತ್ತಿನಿಧಿ ಬಹುಮಾನ ಪಡೆದ ಕೃತಿ–ಕರ್ತೃಗಳ ಹೆಸರುಗಳನ್ನೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅರವಿಂದ ಮಾಲಗತ್ತಿ ಅವರು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಪ್ರಕಟಿಸಿದರು.

2018ನೇ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತರು:

* ಕೆ.ಸಿ.ಶಿವಪ್ಪ

* ಪುರುಷೋತ್ತಮ ಬಿಳಿಮಲೆ

* ಸಿ.ಪಿ.ಸಿದ್ಧಾಶ್ರಮ

* ಜಿ.ಪಾರ್ವತಿ ಐತಾಳ್

* ಜಿ.ಕೃಷ್ಣಪ್ಪ

* ಸತೀಶ ಕುಲಕರ್ಣಿ

* ರಂಗರಾಜ ವನದುರ್ಗ

* ಜಿ.ಅಬ್ದುಲ್‌ ಬಷೀರ್‌

* ಗಂಗಾರಾಂ ಚಂಡಾಳ

* ಎಚ್‌.ಎಲ್‌.ಪುಷ್ಪ

2017ನೇ ಸಾಲಿನ ಪುಸ್ತಕ ಬಹುಮಾನ ಪಡೆದವರು

ಪ್ರಕಾರ ಕೃತಿಯ ಹೆಸರು ಲೇಖಕರು
ಕಾವ್ಯ ಮೌನ ಮಾತಿನ ಸದ್ದು ಚಂದ್ರಶೇಖರ ತಾಳ್ಯ
ಯುವಕವಿಗಳ ಪ್ರಥಮ ಸಂಕಲನ ಮೀನು ಪೇಟೆಯ ತಿರುವು ರೇಣುಕಾ ರಮಾನಂದ
ಕಾದಂಬರಿ ಹಿಜಾಬ್‌ ಗುರುಪ್ರಸಾದ್‌ ಕಾಗಿನೆಲೆ
ಸಣ್ಣಕತೆ 180ನೇ ಡಿಗ್ರಿ ನಾಗರಾಜ ರಾಮಸ್ವಾಮಿ ವಸ್ತಾರೆ
ನಾಟಕ ಮತ್ತೊಬ್ಬ ರಾಧೆ ಬಸವರಾಜ ಸಬರದ
ಲಲಿತ ಪ್ರಬಂಧ ಬಣ್ಣ ವರೆಸುವ ಎಣ್ಣೆಗನ್ನಡಿ ಪ್ರಜ್ಞಾ ಮತ್ತಿಹಳ್ಳಿ
ಪ್ರವಾಸ ಸಾಹಿತ್ಯ ಸಪ್ತ ಕನ್ಯೆಯರ ಕನ್ನೆಭೂಮಿಯಲ್ಲಿ ನಮ್ಮ ನಡೆ ಇಂದಿರಾ ಹೆಗ್ಗಡೆ
ಆತ್ಮಕಥೆ ಅಮೃತಯಾನ–5ಸಂಪುಟಗಳು ಅಮೃತಾ ರಕ್ಷಿದಿ
ಸಾಹಿತ್ಯ ವಿಮರ್ಶೆ ಅರ್ಥದಾಚೆಯ ಬೆಡಗು ಎಚ್‌.ಶಶಿಕಲಾ
ಗ್ರಂಥಸಂಪಾದನೆ ಮಲ್ಲಣ ಕವಿಯ ಕೋಕಶಾಸ್ತ್ರ ಎಫ್‌.ಟಿ.ಹಳ್ಳಿಕೇರಿ
ಮಕ್ಕಳ ಸಾಹಿತ್ಯ ಮೊಟ್ಟೆಯೊಡೆದ ಮರಿಗಳು ವಿ.ಶಾರದಾ ಮೂರ್ತಿ
ವಿಜ್ಞಾನ ಸಾಹಿತ್ಯ ಹವಾಗುಣದ ರುಜು ಬದಲಾಗಿದೆ ಬಿ.ಎಸ್‌.ಸೋಮಶೇಖರ
ಮಾನವಿಕ ಅಂಬೇಡ್ಕರ್‌ ಭಾರತ ಎಚ್‌.ಟಿ.ಪೋತೆ
ಸಂಶೋಧನೆ ಆತ್ಮಬಲಿದಾನ ಜೆ.ಎಂ.ನಾಗಯ್ಯ
ಅನುವಾದ(ಕನ್ನಡಕ್ಕೆ) ಲಲಿತ ವಿಸ್ತರ ಆರ್‌.ಶೇಷಶಾಸ್ತ್ರಿ
ಅನುವಾದ(ಕನ್ನಡದಿಂದ ಭಾರತೀಯ ಭಾಷೆಗೆ) ಎಂ.ಎಂ.ಕಲಬುರ್ಗಿ ಗೋಪಾಲ ಮಹಾಮುನಿ
ಅಂಕಣ ಬರಹ/ವೈಚಾರಿಕ ಬರಹ ಅನುದಿನದ ದಂದುಗ ವಿನಯಾ ಒಕ್ಕುಂದ
ಸಂಕೀರ್ಣ ನಾನು ಕನ್ನಂಬಾಡಿ ಕಟ್ಟೆ–ಹೀಗೊಂದು ಆತ್ಮಕಥೆ ಪಿ.ವಿ.ನಂಜರಾಜ ಅರಸು
ಲೇಖಕರ ಮೊದಲ ಸ್ವತಂತ್ರ ಕೃತಿ ಕೃಷ್ಣ ಮುದ್ರಿಕೆ(ಕಾದಂಬರಿ) ಸಿ.ಮಂಗಳಾ

2017ನೇ ವರ್ಷದ ಅಕಾಡೆಮಿ ದತ್ತಿನಿಧಿ ಬಹುಮಾನ ಗಳಿಸಿದವರು

ಪ್ರಕಾರ ಕೃತಿಯ ಹೆಸರು ಲೇಖಕರು
ಕಾವ್ಯ(ಚಿ.ಶ್ರೀನಿವಾಸರಾಜು ದತ್ತಿನಿಧಿ) ಕಾಲುದಾರಿ ಎಂ.ಚೆನ್ನರಾಜು ಬಸಪ್ಪನದೊಡ್ಡಿ
ಕಾದಂಬರಿ(ಚದುರಂಗ ದತ್ತಿ) ಬೇರು ಫಕೀರ
ಲಲಿತ ಪ್ರಬಂಧ(ಇಂದಿರಾ ದತ್ತಿ) ದಂಡಿಗೆ ಹೆದರಲ್ಲ ದಾಳಿಗೆ ಹೆದರಲ್ಲ ವಸುಮತಿ ಉಡುಪ
ಜೀವನ ಚರಿತೆ(ಸಿಂಪಿ ಲಿಂಗಣ್ಣ ದತ್ತಿ) ಅಗ್ನಿ ದಿವ್ಯದ ಹುಡುಗಿ ಚಂದ್ರಶೇಖರ ಮಂಡೆಕೋಲು
ವಿಮರ್ಶೆ(ಪಿ.ಶ್ರೀನಿವಾಸರಾವ್‌ ದತ್ತಿ) ಎದೆಗೆ ಎದೆ ಮಿಡಿತ ರಾಘವೇಂದ್ರ ಪಾಟೀಲ
ಅನುವಾದ(ಎಲ್‌.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ) ಸಾಹಿತ್ಯ ವಿಮರ್ಶೆಯ ಮಾದರಿಗಳು;ಭಾಗ 2, 3 ಸಿ.ಆರ್‌.ಯರವಿನತೆಲಿಮಠ
ಲೇಖಕರ ಮೊದಲ ಸ್ವತಂತ್ರ ಕೃತಿ(ಮಧುರಚೆನ್ನ ದತ್ತಿ) ನೀಲಿ ಮೂಗಿನ ನತ್ತು ಎಚ್‌.ಆರ್‌.ಸುಜಾತಾ
ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ(ಅಮೆರಿಕನ್ನಡ ದತ್ತಿ) ಕರಿಮಾಯಿ ಮೂಲ–ಚಂದ್ರಶೇಖರ ಕಂಬಾರ;ಕೃಷ್ಣಾ ಮನವಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT