ಪ್ರೊ.ಜಿ.ವೆಂಕಟಸುಬ್ಬಯ್ಯ ಅವರಿಗೆ ‘ಭಾಷಾ ಸಮ್ಮಾನ್’ ಗೌರವ

7
ನಾಗರಾಜಪ್ಪರ ‘ಅನುಶ್ರೇಣಿ-ಯಜಮಾನಿಕೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಪ್ರೊ.ಜಿ.ವೆಂಕಟಸುಬ್ಬಯ್ಯ ಅವರಿಗೆ ‘ಭಾಷಾ ಸಮ್ಮಾನ್’ ಗೌರವ

Published:
Updated:

ನವದೆಹಲಿ: ಕನ್ನಡದ‌ ಲೇಖಕ, ಭಾಷಾ ಶಾಸ್ತ್ರಜ್ಞ ಜಿ.ವೆಂಕಟಸುಬ್ಬಯ್ಯ ಅವರು ದಕ್ಷಿಣ ಭಾರತ ವಿಭಾಗಕ್ಕೆ‌ ನೀಡಲಾಗುವ 2016-17ನೇ ಸಾಲಿನ ಭಾಷಾ ಸಮ್ಮಾನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ 2018ನೇ ಸಾಲಿನ ಪ್ರಶಸ್ತಿಗೆ ಕನ್ನಡದ ಕೆ.ಜಿ.ನಾಗರಾಜಪ್ಪ ಅವರ ಚಿಂತನಶೀಲ ಬರಹ ಮಾಲಿಕೆಯಾದ 'ಅನುಶ್ರೇಣಿ- ಯಜಮಾನಿಕೆ' ವಿಮರ್ಶಾ ಕೃತಿ ಆಯ್ಕೆಯಾಗಿದೆ.

ಈ ಎರಡೂ ಪ್ರಶಸ್ತಿಗಳು ತಲಾ ₹ 1 ಲಕ್ಷ ಹಾಗೂ ಸ್ಮರಣಿಕೆ ಒಳಗೊಂಡಿದ್ದು, 2019ರ ಜನವರಿ 29ರಂದು ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿಯ ಕಾರ್ಯದರ್ಶಿ ಕೆ.ಶ್ರೀನಿವಾಸರಾವ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದನ್ನೂ ಓದಿ: ಇಗೋ ಹಳೆಯ ಬೆಂಗಳೂರು!- ಜಿವಿ ಮಾತು 

ಡಾ.ತಾರಿಣಿ ಶುಭದಾಯಿನಿ, ಪ್ರೊ.ಬಸವರಾಜ ಡೋಣೂರ, ಹಾಗೂ ಚಿದಾನಂದ ಸಾಲಿ ಅವರಿದ್ದ ಆಯ್ಕೆ ಸಮಿತಿಯು ಕನ್ನಡ ವಿಭಾಗದ ಕೃತಿಗಳನ್ನು ಪ್ರಶಸ್ತಿಗಾಗಿ ಶಿಫಾರಸು ಮಾಡಿತ್ತು ಎಂದು ಅವರು ಹೇಳಿದರು.

ದೇಶದ 24 ಭಾಷೆಗಳಲ್ಲಿ ಪ್ರಕಟವಾಗಿರುವ ಕೃತಿಗಳಿಗೆ ಪ್ರಶಸ್ತಿ ನೀಡಲಾಗಿದ್ದು, ಕಾವ್ಯ, ಸಣ್ಣ ಕಥೆ, ಕಾದಂಬರಿ, ವಿಮರ್ಶೆ, ಪ್ರಬಂಧ ಹಾಗೂ ನಾಟಕ ವಿಭಾಗದ ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !