ದಾವಣಗೆರೆ: ಈ ಸರ್ಕಾರಕ್ಕೆ ಹೆಚ್ಚು ಆಯುಷ್ಯವಿಲ್ಲ. ಮಧ್ಯಂತರ ಚುನಾವಣೆ ಬರಲಿದೆ ಎಂದು ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪುನರುಚ್ಚರಿಸಿದ್ದಾರೆ.

‘ಬಿತ್ತಿದ ಬೆಳೆಸು ಪರರು ಕೊಯ್ದಾರು. ಹಂಚಿದ ಬೀಜ ಒಂದು, ಬೆಳೆದ ಫಸಲು ಇನ್ನೊಂದು’ ಎಂದು ಕಳೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ನಾನು ದೆಹಲಿಯಲ್ಲಿ ಹೇಳಿದ್ದೆ. ಒಂದು ವರ್ಷದಿಂದ 18 ತಿಂಗಳುಗಳ ಒಳಗೆ ಮತ್ತೆ ಮತ ಬೇಡುತ್ತಾರೆ ಎಂದು ಆವಾಗ ತಿಳಿಸಿದ್ದೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಈ ವರ್ಷ ಮಳೆ ಕೊರತೆ ಆಗುವುದಿಲ್ಲ. ಗಾಳಿ ಹೋದ ಮೇಲೆ ಮಳೆ ಬರುತ್ತದೆ. ಸಮಸ್ಯೆ ಉಂಟಾಗುವುದಿಲ್ಲ ಎಂದು ಹವಾಮಾನ ಬಗ್ಗೆ ಭವಿಷ್ಯ ನುಡಿದರು.

ಸರ್ಕಾರ ಏನಾಗಲ್ಲ: ಮೈತ್ರಿ ಸರ್ಕಾರವನ್ನು ಯಾರಿಂದಲೂ ಬೀಳಿಸಲು ಸಾಧ್ಯವಿಲ್ಲ. ಯಾರು ರಾಜೀನಾಮೆ ನೀಡಿದರೂ ತೊಂದರೆ ಉಂಟಾಗುವುದಿಲ್ಲ. ಐದು ವರ್ಷ ಸರ್ಕಾರ ಸುಭದ್ರವಾಗಿ ನಡೆಯಲಿದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ಆನಂದ್ ಸಿಂಗ್ ರಾಜೀನಾಮೆಯ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.