‘ಒಡಕು ಮೂಡಿಸುವವರ ಕೈಯಲ್ಲಿ ದೇಶ’

7
ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಕಿಡಿ

‘ಒಡಕು ಮೂಡಿಸುವವರ ಕೈಯಲ್ಲಿ ದೇಶ’

Published:
Updated:

ಬೆಂಗಳೂರು: ‘ಸಮಾಜದಲ್ಲಿ ಒಡಕು ಮೂಡಿಸುವವರು ದೇಶ ಆಳುತ್ತಿದ್ದಾರೆ’ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಪಕ್ಷದ ವತಿಯಿಂದ ಪುರಭವನದಲ್ಲಿ ಗುರುವಾರ ನಡೆದ ಕ್ವಿಟ್‌ ಇಂಡಿಯಾ ಚಳವಳಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವಿರುದ್ಧ ಮಾತನಾಡಿದರೆ ದೇಶದ್ರೋಹಿ, ಪರವಾಗಿದ್ದರೆ ದೇಶಪ್ರೇಮಿ. ಕೆಲವರು ಮಾಡುತ್ತಿರುವ ಷಡ್ಯಂತ್ರವಿದು’ ಎಂದು ಟೀಕಿಸಿದರು.

‘ಹಿಂದೂ ಮಹಾಸಭಾದಿಂದ ಜನಸಂಘ ಬಂತು. ಜನಸಂಘದಿಂದಲೇ ಇವತ್ತಿನ ಬಿಜೆಪಿ‌ ಬಂದಿದೆ. ಅಂದು ಬ್ರಿಟಿಷರನ್ನು ಹಿಂದೂ ಮಹಾಸಭಾ ಬೆಂಬಲಿಸಿತ್ತು. ಆರ್‌ಎಸ್ಎಸ್ ಕೂಡ ಬ್ರಿಟಿಷರ ಪರ ನಿಂತಿತ್ತು. ಮುಸ್ಲಿಂ ಲೀಗ್ ಅನ್ನು ಹಿಂದೂ ಮಹಾಸಭಾ ಬೆಂಬಲಿಸಿತ್ತು. ಹಿಂದೂ ಸಂಘಟನೆಗಳ ದ್ವಂದ್ವ ನೀತಿಯಿದು’ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ವಿರುದ್ಧ ದಿನೇಶ್ ಕಿಡಿಕಾರಿದರು.

‘ಒಂದೇ ಪಕ್ಷ, ಒಂದೇ ಧರ್ಮ. ನಾವು ಹೇಳಿದ್ದೇ ನಡೆಯಬೇಕು ಎನ್ನುವುದು ಮೂಲಭೂತವಾದಿಗಳ ಸಿದ್ಧಾಂತ‌. ವಿರುದ್ಧ ಧ್ವನಿ ಎತ್ತಿದವರನ್ನು ಮುಗಿಸುವ ಕೆಲಸ ಈಗ ನಡೆಯುತ್ತಿದೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !