ಶನಿವಾರ, ಜೂಲೈ 4, 2020
24 °C

ಹೊಸಬಾಳೆಗೆ ಸಾಮಾನ್ಯ ಜ್ಞಾನದ ಕೊರತೆ ಇರುವಂತಿದೆ: ಕೆಪಿಸಿಸಿ ವಕ್ತಾರ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಧಿಕ್ಕರಿಸಿ ಮಾತನಾಡಿರುವ ಆರ್‌ಎಸ್ಎಸ್‌ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಪ್ರಜಾಪ್ರಭುತ್ವದ ಭದ್ರ ಬುನಾದಿಯ ಮೇಲೆ ಸರ್ಕಾರಗಳು ರಚನೆಯಾಗುತ್ತವೆ ಎನ್ನುವುದನ್ನು ಮರೆತಂತಿದೆ’ ಎಂದು ಕೆಪಿಸಿಸಿ ವಕ್ತಾರ ಮೆಹಬೂಬ್‌ ಪಾಷ ಹೇಳಿದ್ದಾರೆ.

‘ಪ್ರಜಾವಾಣಿ’ ಸಂದರ್ಶನದಲ್ಲಿ ಹೊಸಬಾಳೆ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಟೀಕಿಸಿರುವ ಪಾಷ, ‘ಹೊಸಬಾಳೆ ಅವರಿಗೆ ಸಾಮಾನ್ಯ ಜ್ಞಾನದ ಕೊರತೆ ಇರುವಂತೆಯೂ ಕಾಣುತ್ತಿದೆ’ ಎಂದಿದ್ದಾರೆ.

‘ದೇಶಕ್ಕೆ ಮಾರಕವಾದ ಘಟನೆಗಳು ನಡೆದಾಗ ವಿರೋಧ ಪಕ್ಷಗಳ ಒಗ್ಗಟ್ಟು ಅವಶ್ಯ. ಅಂತಹ ಸನ್ನಿವೇಶ ಬಿಟ್ಟು ದೇಶದೊಳಗೆ ಧರ್ಮಗಳ ಅಂತರ ಹೆಚ್ಚಿದಾಗ ಅಥವಾ ನಿರ್ಗತಿಕರು, ವಲಸೆ ಕಾರ್ಮಿಕರು, ರೈತರು, ಬಡ ಕೂಲಿ ಕಾರ್ಮಿಕರು ನಿಕೃಷ್ಟ ಸ್ಥಿತಿಯಲ್ಲಿದ್ದಾಗ ಅವರ ಪರ ನಿಲ್ಲದ ಸರ್ಕಾರವು ವಿರೋಧ ಪಕ್ಷಗಳಿಂದ ಬೆಂಬಲ ನಿರೀಕ್ಷಿಸುವುದು ಎಷ್ಟು ಸರಿ’ ಎಂದೂ ಅವರು ಪ್ರಶ್ನಿಸಿದ್ದಾರೆ.

‘ಯಾವುದೇ ಸರ್ಕಾರ, ಜನಪರ ಸರ್ಕಾರ ಆಗಬೇಕೇ ಹೊರತು, ಧರ್ಮಧಾರಿತ ಚಟುವಟಿಕೆಯ ಕೇಂದ್ರ ಆಗಬಾರದು. ಆರ್‌ಎಸ್ಎಸ್‌ ಬಿಜೆಪಿಯ ಅಂಗ. ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಎತ್ತಿಹಿಡಿಯುವ ರಾಜಕೀಯೇತರ ಸಂಘಟನೆಗಳು ಸಾಕಷ್ಟಿದ್ದು, ಹಲವು ವರ್ಷಗಳಿಂದ ಜನಪರ ಕೆಲಸಗಳನ್ನು ಮಾಡುತ್ತಿವೆ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು