ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆಗೆ ₹ 60 ಕೋಟಿ ಖರ್ಚು ಮಾಡಿದ್ದು ಯಾರಪ್ಪನ ದುಡ್ಡು?

Last Updated 8 ಮಾರ್ಚ್ 2020, 11:06 IST
ಅಕ್ಷರ ಗಾತ್ರ

ಮೈಸೂರು: ‘ನನ್ನ ಪುತ್ರನ ಮದುವೆ ಬಗ್ಗೆ ವಿಶ್ವನಾಥ್‌ಗೆ ಏಕೆ ಚಿಂತೆ? ಉಪಚುನಾವಣೆಯಲ್ಲಿ ₹ 60 ರಿಂದ 100 ಕೋಟಿ ಖರ್ಚು ಮಾಡಿದ್ದು ಯಾರಪ್ಪನ ಮನೆ ದುಡ್ಡು?’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಶನಿವಾರ ಇಲ್ಲಿ ಬಿಜೆಪಿ ಮುಖಂಡ ಎಚ್‌.ವಿಶ್ವನಾಥ್ ವಿರುದ್ಧ ಹರಿಹಾಯ್ದರು.

‌‘ಉಪಚುನಾವಣೆಗೆ ಖುರ್ಚು ಮಾಡುವಾಗ ಇವರಿಗೆ ಜನರ ಪರಿಸ್ಥಿತಿಯ ಅರಿವು ಇರಲಿಲ್ಲವೇ? ನನ್ನನ್ನು ಬೆಳೆಸಿರುವ ಹಿತೈಷಿಗಳಿಗೆ, ಅಭಿಮಾನಿಗಳಿಗೆ ಊಟ ಕೊಡುವುದು ದುಂದುವೆಚ್ಚವೇ’ ಎಂದು ಪ್ರಶ್ನಿಸಿದರು.

‘ನೆಪಮಾತ್ರಕ್ಕೆ ಇದು ಮದುವೆ ಕಾರ್ಯಕ್ರಮ. ಆದರೆ, ಈ ಮೂಲಕ ಪಕ್ಷದ ಸಂಘಟನೆಗೆ ಒತ್ತು ಕೊಡುವ ಉದ್ದೇಶ ಇಟ್ಟುಕೊಂಡಿದ್ದೇನೆ’ ಎಂದರು.

ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ವಿವಾಹವನ್ನು ‘ದುಂದುವೆಚ್ಚದ ಮದುವೆ’ ಎಂದು ವಿಶ್ವನಾಥ್‌ ಅವರು ಧಾರವಾಡದಲ್ಲಿ ಟೀಕಿಸಿದ್ದರು.

ಪಕ್ಷದ ಚಟುವಟಿಕೆಗಳಿಂದ ದೂರ ಉಳಿದು ಬಿಜೆಪಿ ಜೊತೆ ಗುರುತಿಸಿಕೊಂಡಿರುವ ಶಾಸಕ ಜಿ.ಟಿ.ದೇವೇಗೌಡರ ಕುರಿತು, ‘ಅಕಸ್ಮಾತ್‌ ಈಗಿನ ಸರ್ಕಾರ ಬಿದ್ದು, ನಾಳೆ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಮತ್ತೆ ನಮ್ಮಲ್ಲಿಗೇ ಓಡಿಬರುತ್ತಾರೆ. ಅವರ ಬಗ್ಗೆ ಹೆಚ್ಚು ಚರ್ಚೆ ಬೇಡ’ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.

ರಮೇಶ್‌ ಬಾಬು ಅವರು ಜೆಡಿಎಸ್ ತೊರೆಯುತ್ತಿರುವ ಕುರಿತು, ‘ಅಧಿಕಾರ ಸಿಕ್ಕಿದಾಗ ಎಲ್ಲವೂ ಚೆನ್ನಾಗಿರುತ್ತದೆ. ಅಧಿಕಾರ ಸಿಗದಿದ್ದಾಗ ವರಿಷ್ಠರ ನಡೆ ಚೆನ್ನಾಗಿ ಕಾಣುವುದಿಲ್ಲ. ಇದು ಸರ್ವೇಸಾಮಾನ್ಯ. ಯಾರೋ ಒಬ್ಬ ವ್ಯಕ್ತಿ ಬಿಟ್ಟು ಹೋಗುವುದರಿಂದ ಪಕ್ಷಕ್ಕೆ ಏನೂ ಆಗುವುದಿಲ್ಲ. ಕಾರ್ಯಕರ್ತರಿಂದ ಪಕ್ಷ ಉಳಿದಿದೆ, ಬೆಳೆದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT