ಶೇಷಗಿರಿರಾವ್‌, ಆಮೂರ ಸೇರಿ ಐವರಿಗೆ ಪ್ರಶಸ್ತಿ

7
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಶೇಷಗಿರಿರಾವ್‌, ಆಮೂರ ಸೇರಿ ಐವರಿಗೆ ಪ್ರಶಸ್ತಿ

Published:
Updated:
Prajavani

ಬೆಂಗಳೂರು: ಹಿರಿಯ ಸಾಹಿತಿಗಳಾದ ಎಲ್.ಎಸ್.ಶೇಷಗಿರಿರಾವ್‌, ಜಿ.ಎಸ್‌.ಆಮೂರ ಸೇರಿದಂತೆ ಐವರಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ 2018–19ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಯನ್ನು ನೀಡಿದೆ.

2017ರಲ್ಲಿ ಅನುವಾದಗೊಂಡಿರುವ ಐದು ಪುಸ್ತಕಗಳಿಗೆ ‘ಪುಸ್ತಕ ಬಹುಮಾನ’ವನ್ನೂ ಪ್ರಕಟಿಸಲಾಗಿದೆ.

ಗೌರವ ಪ್ರಶಸ್ತಿಯು ತಲಾ ₹ 50 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ಪುಸ್ತಕ ಬಹುಮಾನ ತಲಾ ₹25 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಕೆ.ಮರುಳಸಿದ್ದಪ್ಪ ತಿಳಿಸಿದ್ದಾರೆ.

ಗೌರವ ಪ್ರಶಸ್ತಿ: ಎಲ್.ಎಸ್.ಶೇಷಗಿರಿರಾವ್ (ಬೆಂಗಳೂರು), ಜಿ.ಎಸ್.ಆಮೂರ (ಧಾರವಾಡ), ಶಾ.ಮಂ.ಕೃಷ್ಣರಾಯ (ಬೆಂಗಳೂರು), ಕಾಶೀನಾಥ ಅಂಬಲಗಿ (ಕಲಬುರ್ಗಿ), ವೀಣಾ ಶಾಂತೇಶ್ವರ (ಧಾರವಾಡ).

ಪುಸ್ತಕ ಬಹುಮಾನ ವಿಭಾಗ: ಪ್ರೀತಿಯ ನಲವತ್ತು ನಿಯಮಗಳು– ಮಮತಾ ಜಿ.ಸಾಗರ್‌ (ಇಂಗ್ಲಿಷ್‌ನಿಂದ ಕನ್ನಡ), ಶಿಖರ ಸೂರ್ಯ–ಲಕ್ಷ್ಮಿ ಚಂದ್ರಶೇಖರ್ (ಕನ್ನಡದಿಂದ ಇಂಗ್ಲಿಷ್‌), ಚಿಂತಾಮಣಿ–ಜಿ.ವಿ.ರೇಣುಕಾ (ಹಿಂದಿಯಿಂದ ಕನ್ನಡ), ಜುಮ್ಮಾ–ಸೃಜನ್‌ (ಹಿಂದಿಯೇತರ ಭಾರತೀಯ ಭಾಷೆಗಳಿಂದ ಕನ್ನಡ), ಇಲಾ ಒಕಜೀವಿತಂ–ಸ.ರಘುನಾಥ (ಕನ್ನಡದಿಂದ ಬೇರೆ ಭಾರತೀಯ ಭಾಷೆಗೆ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !