11 ಆಪಾದಿತರಿಗೆ ಒಂದೇ ದಿನ ಜೈಲು ಶಿಕ್ಷೆ

7

11 ಆಪಾದಿತರಿಗೆ ಒಂದೇ ದಿನ ಜೈಲು ಶಿಕ್ಷೆ

Published:
Updated:

ಬೆಂಗಳೂರು: ಕರ್ನಾಟಕ ಭೂ ಕಬಳಿಕೆ ತಡೆ ವಿಶೇಷ ನ್ಯಾಯಾಲಯವು ಪ್ರತ್ಯೇಕ ಪ್ರಕರಣಗಳಲ್ಲಿ ಬುಧವಾರ 11 ಆಪಾದಿತರಿಗೆ ತಲಾ ಒಂದು ವರ್ಷ ಜೈಲು ಶಿಕ್ಷೆ ಹಾಗೂ ₹5 ಸಾವಿರ ದಂಡ ವಿಧಿಸಿ ಆದೇಶಿಸಿದೆ.

ಒಂದೇ ದಿನ 11 ಮಂದಿಗೆ ಜೈಲು ಶಿಕ್ಷೆ ವಿಧಿಸುವುದು ಇದೇ ಮೊದಲು.

ಉತ್ತರ ಕನ್ನಡ ಹಳಿಯಾಳ ತಹಶೀಲ್ದಾರ್‌ ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಂಗ ಸದಸ್ಯ ಆರ್‌.ಎಚ್‌.ರಡ್ಡಿ ಹಾಗೂ ಕಂದಾಯ ಸದಸ್ಯ ಕೆ.ಆರ್‌.ನಿರಂಜನ್‌ ಅವರ ಪೀಠ ಆದೇಶ ಹೊರಡಿಸಿದೆ. ಸರ್ಕಾರದ ಪರವಾಗಿ ಶೈಲಜಾ ವಾದಿಸಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !