ಶುಕ್ರವಾರ, ಫೆಬ್ರವರಿ 26, 2021
20 °C

ರೈಲ್ವೆ ಹಳಿ ಕೆಳಗೆ ಭೂಕುಸಿತ: ತಪ್ಪಿದ ಅನಾಹುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತರೀಕೆರೆ: ಇಲ್ಲಿಗೆ ಸಮೀಪದ ಹಳಿಯೂರು ಗ್ರಾಮದಲ್ಲಿ ಶನಿವಾರ ನಸುಕಿನ ವೇಳೆ ರೈಲ್ವೆ ಹಳಿಯ ಬಳಿ ಭೂಕುಸಿತ ಸಂಭವಿಸಿದ್ದು, ಸುಮಾರು 7 ಗಂಟೆ ರೈಲು ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.

ಭೂಕುಸಿತ ಉಂಟಾಗಿ ರೈಲ್ವೆ ಹಳಿಗಳು ಕೆಳಕ್ಕೆ ಬಗ್ಗಿರುವುದನ್ನು ಕಂಡ ರೈಲ್ವೆ ಸಿಬ್ಬಂದಿ ಮೇಲಧಿಕಾರಿಗೆ ಸುದ್ದಿ ಮುಟ್ಟಿಸಿದ್ದರು. ಕೂಡಲೇ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ರೈಲನ್ನು ಶಿವಪುರದ ಸಮೀಪ ನಿಲ್ಲಿಸಲಾಯಿತು. ಹೀಗಾಗಿ ಭಾರಿ ಅನಾಹುತವೊಂದು ತಪ್ಪಿತು. ರೈಲಿನಲ್ಲಿದ್ದ 2 ಸಾವಿರಕ್ಕೂ ಅಧಿಕ ಪ್ರಯಾಣಿಕರನ್ನು ಬಸ್‌ಗಳಲ್ಲಿ ಕಳುಹಿಸಿಕೊಡಲಾಯಿತು.

ಬೆಂಗಳೂರಿನಿಂದ ತಾಳಗುಪ್ಪಕ್ಕೆ ಹೋಗುವ ಫಾಸ್ಟ್ ಪ್ಯಾಸೆಂಜರ್ ಸಹಿತ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರಿಗೆ ಸಮಸ್ಯೆಯಾಯಿತು. ಬೆಳಿಗ್ಗೆ 10 ಗಂಟೆಗೆ ಹಳಿಯನ್ನು ಸರಿಪಡಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು