ವಿರೋಧ ಪಕ್ಷದಿಂದ ಅಡ್ಡಿ: ಪರಿಷತ್ ಕಲಾಪ 3 ಗಂಟೆವರೆಗೆ ಮುಂದೂಡಿಕೆ

7

ವಿರೋಧ ಪಕ್ಷದಿಂದ ಅಡ್ಡಿ: ಪರಿಷತ್ ಕಲಾಪ 3 ಗಂಟೆವರೆಗೆ ಮುಂದೂಡಿಕೆ

Published:
Updated:

ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಮಧ್ಯಾಹ್ನ 12.15ಕ್ಕೆ ಕಲಾಪ ಮತ್ತೆ ಆರಂಭವಾದಾಗಲೂ ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದರು. ‍'ಯಾವ ಕಾರಣಕ್ಕೆ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದೀರಿ ಎಂಬುದನ್ನಾದರೂ ಹೇಳಿ' ಎಂದು ವಿರೋಧ ಪಕ್ಷದ ನಾಯಕರನ್ನು ಸಭಾಪತಿ ಪ್ರಶ್ನಿಸಿದರು. 

‘ಸರ್ಕಾರಕ್ಕೆ ಬಹುಮತವೇ ಇಲ್ಲ. ಕಲಾಪ ನಡೆಸುವುದರಲ್ಲಿ ಅರ್ಥವೇ ಇಲ್ಲ’ ಎಂದು ಕೋಟ ಶ್ರೀನಿವಾಸ ಪೂಜಾರಿ ಉತ್ತರಿಸಿದರು. ‘ಹಾಗಿದ್ದರೆ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸಬಹುದಲ್ಲವೇ. ಅದನ್ನು ಬಿಟ್ಟು ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯೇ’ ಎಂದು ಸಭಾಪತಿ ಪ್ರಶ್ನಿಸಿದರು.

‘ಮುಖ್ಯಮಂತ್ರಿ ರಾಜಿನಾಮೆ ಕೊಡುವುದು ಒಂದೇ ದಾರಿ’ ಎಂದು ಕೋಟ ಪ್ರತಿಕ್ರಿಯಿಸಿದರು. ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದೆದುರು ಗದ್ದಲ ನಡೆಸುತ್ತಿದ್ದ ನಡುವೆಯೇ ವಿವಿಧ ಕಾಗದ ಪತ್ರಗಳನ್ನು ಮಂಡಿಸಲಾಯಿತು. ಬಳಿಕ ಸಭಾಪತಿಯವರು ಕಲಾಪವನ್ನು ಮಧ್ಯಾಹ್ನ 3ಕ್ಕೆ ಮುಂದೂಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 2

  Sad
 • 0

  Frustrated
 • 3

  Angry

Comments:

0 comments

Write the first review for this !