ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ.ಶಿವಕುಮಾರ್ ಸ್ವತಃ ವೈದ್ಯಕೀಯ ಕಾಲೇಜು ಆರಂಭಿಸಲಿ: ಅಶ್ವತ್ಥ ನಾರಾಯಣ

ಜಿಲ್ಲಾ ಕೇಂದ್ರಗಳಿಗೆ ಮೊದಲು ಆದ್ಯತೆ, ಪ್ರತಿಷ್ಠೆಗಳನ್ನು ಆಮೇಲೆ ನೋಡೋಣ ಎಂದ ಡಿಸಿಎಂ
Last Updated 10 ಡಿಸೆಂಬರ್ 2019, 7:46 IST
ಅಕ್ಷರ ಗಾತ್ರ

ಕಾರವಾರ: ‘ರಾಜ್ಯದ ಎಷ್ಟೋ ಜಿಲ್ಲಾ ಕೇಂದ್ರಗಳಲ್ಲೇ ವೈದ್ಯಕೀಯ ಕಾಲೇಜು ಸ್ಥಾಪನೆ ಆಗಿಲ್ಲ. ಇದಕ್ಕೂ ಮೊದಲೇ ತಾಲ್ಲೂಕು ಮಟ್ಟದಲ್ಲಿ ಆರಂಭಿಸುವಂತೆ ಕೇಳುವುದು ಎಷ್ಟು ಸಮಂಜಸ, ನ್ಯಾಯಬದ್ಧ? ಕನಕಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವ ವಿಚಾರದಲ್ಲಿಪ್ರತಿಷ್ಠೆಗಳನ್ನು ಆಮೇಲೆ ನೋಡೋಣ. ಡಿ.ಕೆ.ಶಿವಕುಮಾರ್ ಅವರಿಗೆ ಅಷ್ಟು ಕಾಳಜಿ ಇದ್ದರೆ ಅವರೇ ಸ್ವತಃಕಾಲೇಜು ಆರಂಭಿಸಲಿ’ ಎಂದು ಉಪ ಮುಖ್ಯಮಂತ್ರಿಅಶ್ವತ್ಥ ನಾರಾಯಣ ಸವಾಲು ಎಸೆದರು.

ನಗರದ ವೈದ್ಯಕೀಯ ಕಾಲೇಜಿಗೆ ಮಂಗಳವಾರ ಭೇಟಿ ನೀಡಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ಜಿಲ್ಲಾ ಕೇಂದ್ರಗಳಲ್ಲಿ ಮೊದಲು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವುದು ಮುಖ್ಯ.ತೆರಿಗೆದಾರರ ಹಣ ಅತಿ ಅಮೂಲ್ಯವಾದುದು. ಅದನ್ನು ಸದ್ಬಳಕೆ ಮಾಡಬೇಕು. ಈಗಾಗಲೇ ಸರ್ಕಾರ ಎಲ್ಲೆಲ್ಲಿ ವೈದ್ಯಕೀಯ ಸಂಸ್ಥೆಗಳನ್ನು ಕಟ್ಟಿದೆಯೋ ಅವುಗಳನ್ನು ಅಭಿವೃದ್ಧಿ ಮಾಡುವುದೇ ದೊಡ್ಡ ಸವಾಲಾಗಿದೆ. ಅಲ್ಲೇ ನೂರೆಂಟು ನ್ಯೂನತೆಗಳಿವೆ. ಅವುಗಳನ್ನು ಸರಿಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.

‘ವಿಧಾನಸಭೆ ಉಪಚುನಾವಣೆಯಲ್ಲಿ15 ಕ್ಷೇತ್ರಗಳ ಪೈಕಿ ಕನಿಷ್ಠ 12 ಕ್ಷೇತ್ರಗಳಲ್ಲಿ ಗೆಲುವಿನ ವಿಶ್ವಾಸವಿತ್ತು. ಮತದಾರರು ಬಹಳ ಪ್ರಬುದ್ಧತೆಯಿಂದ ಸ್ಥಿರ ಹಾಗೂ ಅಭಿವೃದ್ಧಿ ಪೂರಕವಾದ ಸರ್ಕಾರವನ್ನು ಕೊಟ್ಟಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ರಾಜೀನಾಮೆ ಉತ್ತಮ ಬೆಳವಣಿಗೆ:‘ಚುನಾವಣೆಯ ಬಳಿಕ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಹುದ್ದೆಗೆರಾಜೀನಾಮೆ ಕೊಡುತ್ತಾರೆ ಅಂತ ಸಿದ್ದರಾಮಯ್ಯ ಹೇಳುತ್ತಿದ್ದರು. ಈಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕತ್ವಕ್ಕೆ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ರಾಜೀನಾಮೆ ಕೊಟ್ಟಿದ್ದಾರೆ. ಜನಾಭಿಪ್ರಾಯದ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ. ಇವೆಲ್ಲ ಅವರ ಪಕ್ಷಕ್ಕೆ ಬಿಟ್ಟಿರುವ ವಿಚಾರ. ಆದರೆ, ಫಲಿತಾಂಶದ ಬಳಿಕ ಹೊಣೆಹೊತ್ತುಕೊಂಡುರಾಜೀನಾಮೆ ಕೊಟ್ಟಿರುವುದು ಪ್ರಜಾಪ್ರಭುತ್ವದಲ್ಲಿ ಉತ್ತಮ ಬೆಳವಣಿಗೆ’ ಎಂದುಅಭಿಪ್ರಾಯಪಟ್ಟರು.

‘ಚುನಾವಣೆಯಲ್ಲಿಗೆದ್ದಬಿಜೆಪಿ ಅಭ್ಯರ್ಥಿಗಳಿಗೆ ಸಚಿವ ಸ್ಥಾನ ಮತ್ತು ಸೋತವರ ಬಗ್ಗೆ ಮುಖ್ಯಮಂತ್ರಿ, ಪಕ್ಷದ ಮುಖಂಡರು ಹಾಗೂ ರಾಜ್ಯ ಘಟಕದ ಅಧ್ಯಕ್ಷರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಸಂಪುಟ ವಿಸ್ತರಣೆ ಸದ್ಯದಲ್ಲೇಆಗಲಿದೆ’ ಎಂದು ಅವರು ತಿಳಿಸಿದರು.

ಗಡಿ ವಿವಾದಕ್ಕೆಹೆಚ್ಚಿನ ಮಹತ್ವ ಬೇಡ: ಮಹಾರಾಷ್ಟ್ರದ ಕೆಲವು ರಾಜಕೀಯ ನಾಯಕರು ಮತ್ತೆ ಗಡಿ ವಿವಾದವನ್ನು ಕೆದಕುತ್ತಿರುವ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಇದುರಾಜಕೀಯ ಪ್ರೇರಿತ. ಹಾಗಾಗಿ ಅಂತಹ ಮಾತುಗಳಿಗೆ ಮಹತ್ವ ಕೊಡದೇಗಡಿಭಾಗಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಕೊಟ್ಟು,ಅಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಲಾಗುತ್ತದೆ. ಕಾನೂನು ಬದ್ಧವಾಗಿ ಏನು ಮಾಡಬೇಕೋ ಅದನ್ನು ಮಾಡಲಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT