ಬುಧವಾರ, ಮೇ 27, 2020
27 °C

ಮದ್ಯ ಸಿಗದೆ ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ಮದ್ಯವ್ಯಸನಿಯೊಬ್ಬರು ಕುಡಿಯಲು ಮದ್ಯ ಸಿಗದೆ ಮಾನಸಿಕವಾಗಿ ಕುಗ್ಗಿ, ಮೃತಪಟ್ಟ ಘಟನೆ ಸವಣೂರು ಗ್ರಾಮದ ಚಾಪಲ್ಲ ಎಂಬಲ್ಲಿ ಗುರುವಾರ ನಡೆದಿದೆ.

ಮೃತ ವ್ಯಕ್ತಿ ಆನಂದ (32) ಪ್ರತಿದಿನ ಮದ್ಯ ಸೇವಿಸುತ್ತಿದ್ದರು. ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಲಾಕ್‌ಡೌನ್‌ ಘೋಷಿಸಿದ ಬಳಿಕ ಎಲ್ಲ ಮದ್ಯದಂಗಡಿಗಳು ಬಂದ್ ಆಗಿದ್ದವು. ಎಲ್ಲಿಯೂ ಮದ್ಯ ಸಿಗದ ಕಾರಣ ಅವರು ಮಾನಸಿಕವಾಗಿ ಕುಗ್ಗಿದ್ದರು. ಮದ್ಯದಂಗಡಿ ಬಂದ್ ಆಗಿದ್ದರೂ ವೈನ್‌ ಶಾಪ್‌ ಎದುರು ಕಾಯುತ್ತ ಕಾಲ ಕಳೆಯುತ್ತಿದ್ದರೆನ್ನಲಾದ ಅವರು ಗುರುವಾರ ಮನೆಯಲ್ಲಿ ಮೃತಪಟ್ಟಿದ್ದಾರೆ.

ಮೃತರಿಗೆ ತಂದೆ, ತಾಯಿ ಹಾಗೂ ಸಹೋದರ ಇದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.