ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯದ ಅಮಲಲ್ಲಿ ಕೊಲೆ; ಠಾಣೆ ಹಿಂಭಾಗದಲ್ಲೇ ಸಾವು

Last Updated 5 ಮೇ 2020, 20:26 IST
ಅಕ್ಷರ ಗಾತ್ರ

ಬೆಂಗಳೂರು: ಮದ್ಯ ಮಾರಾಟ ಆರಂಭವಾದ ಬೆನ್ನಲ್ಲೇ ನಗರದ ಹಲವೆಡೆ ಗಲಾಟೆಗಳು ನಡೆದಿವೆ. ಸೋಮವಾರ ಒಂದೇ ದಿನದಲ್ಲೇ ಎರಡು ಕೊಲೆ ಆಗಿದ್ದು, ಹ್ರೈಗ್ರೌಂಡ್ಸ್ ಠಾಣೆ ಹಿಂಭಾಗದಲ್ಲೇ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ನಗರದ ಮದ್ಯದಂಗಡಿ ಎದುರು ಸರದಿಯಲ್ಲಿ ನಿಂತು ಮದ್ಯ ಖರೀದಿಸಿದ್ದ ಬಹುತೇಕರು, ಗುಂಪು ಸೇರಿ ಪಾರ್ಟಿ ಮಾಡಿದ್ದಾರೆ. ಶ್ರೀರಾಮಪುರ, ಸುಬ್ರಮಣ್ಯಪುರ, ಕೆಂಗೇರಿ, ವಿದ್ಯಾರಣ್ಯಪುರ ಸೇರಿ ಕೆಲ ಪ್ರದೇಶಗಳಲ್ಲಿ ಮದ್ಯದ ಅಮಲಿನಲ್ಲಿದ್ದವರು ಗಲಾಟೆ ಮಾಡಿದ್ದಾರೆ. ಅದನ್ನು ಪ್ರಶ್ನಿಸಿದವರ ಮೇಲೆ ಹಲ್ಲೆಗಳು ನಡೆದಿವೆ.

ಲಾಕ್‌ಡೌನ್ ಆದಾಗಿನಿಂದಲೂ ಕೊಳೆಗೇರಿ ಪ್ರದೇಶಗಳಲ್ಲಿ ಮದ್ಯವ್ಯಸನಿಗಳ ಕಾಟ ಇರಲಿಲ್ಲ. ಸೋಮವಾರ ಅಲ್ಲೆಲ್ಲ ಮದ್ಯವ್ಯಸನಿಗಳ ಹಾವಳಿಯೇ ಹೆಚ್ಚಿತ್ತು. ದಾರಿಯಲ್ಲಿ ಸಿಕ್ಕ ಸಿಕ್ಕವರಿಗೆ ವ್ಯಸನಿಗಳು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಕೊಲೆ: ಸೋಮವಾರ ರಾತ್ರಿ ಜೀವನ್‌ಬಿಮಾ ನಗರ ಠಾಣೆ ವ್ಯಾಪ್ತಿಯಲ್ಲಿ ಶ್ರೀನಿವಾಸ್ (42) ಎಂಬುವರ ಕೊಲೆ ಆಗಿದೆ.

ಗಣಪತಿ ಕಾಲೊನಿ ನಿವಾಸಿ ಶ್ರೀನಿವಾಸ್, ಅವಿವಾಹಿತ. ಅವರ ಕೊಲೆ ಸಂಬಂಧ ಸಂತೋಷ್ (32) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಅಕ್ಕ–ಪಕ್ಕದ ನಿವಾಸಿಗಳಾದ ಶ್ರೀನಿವಾಸ್ ಮತ್ತು ಸಂತೋಷ್, ಒಟ್ಟಿಗೆ ಮದ್ಯದಂಗಡಿ ಎದುರು ಸರದಿಯಲ್ಲಿ ನಿಂತು ಮದ್ಯ ತಂದಿದ್ದರು. ದೊಮ್ಮಲೂರು ಸಮೀಪದ ಸ್ಮಶಾನದಲ್ಲಿ ಕುಳಿತು ಮದ್ಯ ಕುಡಿದಿದ್ದರು. ಅದೇ ವೇಳೆಯೇ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿತ್ತು. ಅವಾಗಲೇ ಆರೋಪಿ ಸಂತೋಷ್, ಸ್ಮಶಾನದಲ್ಲೇ ಇದ್ದ ಕಟ್ಟಿಗೆಯಿಂದ ಶ್ರೀನಿವಾಸ್ ತಲೆಗೆ ಹೊಡೆದು ಪರಾರಿಯಾಗಿದ್ದ. ಗಾಯಗೊಂಡಿದ್ದ ಶ್ರೀನಿವಾಸ್ ಮದ್ಯದ ಅಮಲಿನಲ್ಲಿದ್ದರಿಂದ ಆಸ್ಪತ್ರೆಗೂ ಹೋಗದೇ ಮನೆಗೆ ಹೋಗಿ ಮಲಗಿದ್ದರು.’

‘ರಕ್ತ ಸೋರುವುದನ್ನು ನೋಡಿ ಕುಟುಂಬದವರೇ ಶ್ರೀನಿವಾಸ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ’ ಎಂದೂ ಪೊಲೀಸರು ಹೇಳಿದರು.

ಠಾಣೆ ಹಿಂಭಾಗದಲ್ಲೇ ಮೃತದೇಹ; ಮದ್ಯದ ಅಮಲಿನಲ್ಲಿದ್ದ ಮೂರ್ತಿ (55) ಎಂಬುವರು ಹೈಗ್ರೌಂಡ್ಸ್ ಠಾಣೆ ಹಿಂಭಾಗದಲ್ಲಿ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿದ್ದಾರೆ.

‘ಮದ್ಯ ಕುಡಿತು ನಡೆದುಕೊಂಡು ಮನೆಗೆ ಹೊರಟಿದ್ದ ಮೂರ್ತಿ, ಠಾಣೆ ಹಿಂಭಾಗದ ರಸ್ತೆ ಪಕ್ಕದಲ್ಲೇ ಮಲಗಿದ್ದರು. ಅಲ್ಲಿಯೇ ಅಸುನೀಗಿದ್ದು, ದಾರಿಹೋಕರಿಂದ ವಿಷಯ ಗೊತ್ತಾಗಿದೆ. ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT