ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿ ಶ್ರೀನಿವಾಸ ಉಡುಪ ನಿಧನ

Last Updated 11 ಏಪ್ರಿಲ್ 2020, 13:33 IST
ಅಕ್ಷರ ಗಾತ್ರ

ಬೆಂಗಳೂರು: ನಿವೃತ್ತ ‍ಪ್ರಾಧ್ಯಾಪಕ ಮತ್ತು ಸಾಹಿತಿ ಎನ್‌. ಶ್ರೀನಿವಾಸ ಉಡುಪ ಅವರು ಶನಿವಾರ ಮಧ್ಯಾಹ್ನ ನಿಧನರಾದರು.

ಅವರಿಗೆ 84 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

ಸಂಜೆ ಬನಶಂಕರಿ ಚಿತಾಗಾರದಲ್ಲಿ ಕುಟುಂಬದವರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಿತು.

ತೀರ್ಥಹಳ್ಳಿ ತಾಲ್ಲೂಕಿನ ಮಲ್ಲೇಸರದವರಾದ ಉಡುಪ ಅವರು ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ತೀರ್ಥಹಳ್ಳಿ ಮತ್ತು ಶಿವಮೊಗ್ಗದಲ್ಲಿ ಸೇವೆ ಸಲ್ಲಿಸಿ, ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು.

ಕವಿತೆ, ಕಾವ್ಯಸ್ವಾದನೆ, ಅನುವಾದ, ಮಕ್ಕಳ ಸಾಹಿತ್ಯ, ಅಂಕಣ ಬರಹ ಹೀಗೆ ಅನೇಕ ಪ್ರಾಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದರು.

ಇವರ ಸಾಹಿತ್ಯ ಕೃಷಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಾಂತಾವರ ಕನ್ನಡ ಸಂಘದ ವಾರ್ಷಿಕ ಗೌರವ ಪ್ರಶಸ್ತಿ, ಶಿವಮೊಗ್ಗದ ಕರ್ನಾಟಕ ಸಂಘದ ಶಿವರಾಮಕಾರಂತ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಸಂದಿವೆ.

‘ವಿಹಾರಿ’ ಮತ್ತು ‘ವೈನತೇಯ’ ಗುಪ್ತನಾಮಗಳಲ್ಲಿ ‘ಪ್ರಜಾವಾಣಿ’ ಬಳಗದ ‘ಸುಧಾ’ ವಾರಪತ್ರಿಕೆ ಮತ್ತು ‘ಮಯೂರ’ ಮಾಸಪತ್ರಿಕೆಗೆ ದೀರ್ಘಕಾಲ ಅಂಕಣ ಬರೆದಿದ್ದರು.

‘ಸುಧಾ’ದ ವಿಚಾರ ಲಹರಿ ಅಂಕಣ ಮಾಲಿಕೆಗೆ 2005ರಿಂದ 2015ರ ನಡುವೆ ನಿಯಮಿತವಾಗಿ ಬರೆದಿದ್ದ ಲೇಖನಗಳನ್ನು ಒಟ್ಟು ಸೇರಿಸಿ ‘ವ್ಯವಧಾನ’ ಮತ್ತು ‘ಅಂತರ್ಯಾನ’ ಅವಳಿ ಸಂಪುಟಗಳನ್ನು ತಮಾಲ ಪುಸ್ತಕ ಪ್ರಕಾಶನ ಎರಡು ವರ್ಷಗಳ ಹಿಂದೆ ಹೊರತಂದಿತ್ತು.

ವಸ್ತು ವಿನ್ಯಾಸ, ನಾಲ್ಕುಸಾಲು, ಆಸ್ಪಾದ, ಮಾರ್ದನಿ, ಕುಂಭಕರ್ಣನ ನಿದ್ದೆ, ಪಾಪು ಪದ್ಯಗಳು, ಮುಕ್ತಕ ಮಣಿಮಾಲೆ (ಪುನರ್ಭಾವ), ಸತ್ಯಜಿತ್‌ ರೇ ಕಥೆಗಳು (ಅನುವಾದ) ಉಡುಪರ ಪ್ರಮುಖ ಕೃತಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT