ಬುಧವಾರ, ಜನವರಿ 22, 2020
16 °C
ಹೆಚ್ಚಿದ ಬೇಡಿಕೆ– ಕೆಪಿಎಸ್‌ ಶಾಲೆಗಳ ಜತೆಗೆ ಎಲ್‌ಕೆಜಿ

ಎಲ್‌ಕೆಜಿ 2020ಕ್ಕೆ ದ್ವಿಗುಣ

ರಶ್ಮಿ ಬೇಲೂರು Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ (ಕೆಪಿಎಸ್‌) ಆರಂಭಿಸಿರುವ ಎಲ್‌ಕೆಜಿ ತರಗತಿಗೆ ಬೇಡಿಕೆ ಹೆಚ್ಚಿರುವ ಕಾರಣ ಮುಂದಿನ ವರ್ಷ ಇಂತಹ ಶಾಲೆಗಳ ಸಂಖ್ಯೆಯನ್ನು ಸರ್ಕಾರ ದ್ವಿಗುಣಗೊಳಿಸಲಿದೆ.

2019–20ನೇ ಸಾಲಿನಲ್ಲಿ 276 ಕೆಪಿಎಸ್‌ ಶಾಲೆಗಳಲ್ಲಿ ಎಲ್‌ಕೆಜಿ ಆರಂಭಿಸಲಾಗಿತ್ತು. 2020–21ನೇ ಸಾಲಿನಲ್ಲಿ ಇನ್ನೂ 225 ಕೆಪಿಎಸ್‌ ಶಾಲೆಗಳನ್ನು ಆರಂಭಿಸುವುದರ ಜತೆಗೆ ಎಲ್‌ಕೆಜಿ ತರಗತಿಗಳನ್ನೂ ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಕಳೆದ ವರ್ಷ ಒಂದು ತರಗತಿಗೆ 30 ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಲಾಗಿತ್ತು. 8 ಸಾವಿರ ವಿದ್ಯಾರ್ಥಿಗಳು ಎಲ್‌ಕೆಜಿಗೆ ಪ್ರವೇಶ ಪಡೆದಿದ್ದರು. ಎಲ್‌ಕೆಜಿ ಆರಂಭಿಸಲು ಇನ್ನೂ 2 ಸಾವಿರ ಅರ್ಜಿಗಳು ಬಂದಿದ್ದವು.

‘ಕೆಪಿಎಸ್‌ ಶಾಲೆಯ ಎಲ್‌ಕೆಜಿ ತರಗತಿಗಳಿಗೆ ಸೇರಿದ ವಿದ್ಯಾರ್ಥಿಗಳ ಹಿನ್ನೆಲೆಯ ಬಗ್ಗೆ ಸಮೀಕ್ಷೆ ನಡೆಸಲಾಗಿದ್ದು, ಶೇ 40ರಷ್ಟು ಮಂದಿ ಮಧ್ಯಮ ಮತ್ತು ಮೇಲ್ವರ್ಗಕ್ಕೆ ಸೇರಿದವರು. ಈ ತರಗತಿಗಳು ಆರಂಭವಾಗದಿದ್ದರೆ ಇವರೆಲ್ಲ ಖಾಸಗಿ ಶಾಲೆಗಳಿಗೆ ಸೇರಿಕೊಳ್ಳುವವರೇ ಆಗಿದ್ದರು ಎಂಬುದು ಸ್ಪಷ್ಟವಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಶಿಕ್ಷಕರ ಗುಣಮಟ್ಟವೂ ಉತ್ತಮವಾಗಿದೆ. ಎಲ್‌ಕೆಜಿ ಮಕ್ಕಳನ್ನು ನಿಭಾಯಿಸುವ ಚಾಕಚಕ್ಯತೆಯನ್ನು ಖಾಸಗಿ ಶಾಲೆಗಳ ಶಿಕ್ಷಕರಂತೆಯೇ ಗಳಿಸಿಕೊಂಡಿದ್ದಾರೆ’ ಎಂದೂ ಹೇಳಿದ್ದಾರೆ. 

ಅಂಗನವಾಡಿಗಳಿಂದ ಪ್ರತಿಭಟನೆ: ಇಂತಹ ಶಾಲೆಗಳು ಹೆಚ್ಚು ಹೆಚ್ಚು ಆರಂಭವಾದರೆ ಅಂಗನವಾಡಿಗಳಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ. ಇದರ ಫಲವಾಗಿ ಅಂಗನವಾಡಿ ಕಾರ್ಯಕರ್ತರು ನಿರುದ್ಯೋಗಿಗಳಾಗಬೇಕಾಗುತ್ತದೆ ಎಂಬ ಆಕ್ಷೇಪವೂ ಬಲವಾಗಿ ಕೇಳತೊಡಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು