ಗುರುವಾರ , ಆಗಸ್ಟ್ 5, 2021
21 °C

ರಾಜ್ಯಸಭೆಗೆ ಖರ್ಗೆ ಅವಿರೋಧ ಆಯ್ಕೆ; ವಿಜಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಪ್ರಯುಕ್ತ ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿ ಎದುರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಖರ್ಗೆ ಅವರ ಭಾವಚಿತ್ರ ಹಿಡಿದು ವಿಜಯೋತ್ಸವ ಆಚರಿಸಿದರು.

ಅತ್ತ ವಿಧಾನಸಭೆಯಲ್ಲಿ ಖರ್ಗೆ ಅವರು ಚುನಾವಣಾಧಿಕಾರಿಗಳಿಂದ ರಾಜ್ಯಸಭೆಗೆ ಆಯ್ಕೆಯಾದ ಬಗ್ಗೆ ಪ್ರಮಾಣಪತ್ರ ಸ್ವೀಕರಿಸುತ್ತಿದ್ದಂತೆಯೇ ನಗರದಲ್ಲಿ ಪಕ್ಷದ ಕಾರ್ಯಕರ್ತರ ಉತ್ಸಾಹ ಮೇರೆ ಮೀರಿತ್ತು. 

ಪಟಾಕಿ ಸಿಡಿಸುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡರು. ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ಗಳನ್ನು ತಯಾರಿಸಿ ಶುಭಾಶಯಗಳನ್ನು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಮಹಾಂತಪ್ಪ ಸಂಗಾವಿ, ನೀಲಕಂಠರಾವ ಮೂಲಗೆ, ರಾಜಗೋಪಾಲ ರೆಡ್ಡಿ, ಅರುಣಕುಮಾರ ಪಾಟೀಲ, ಡಾ.ಕಿರಣ ದೇಶಮುಖ, ಈರಣ್ಣ ಝಳಕಿ, ಜಿ. ವಿಜಯಕುಮಾರ, ಚಂದ್ರಶೇಖರ ಸುಲ್ತಾನಪೂರ, ಮಜರಖಾನ, ಮಾಪಣ್ಣಾ ಗಂಜಗೇರಿ, ಶಾಮರಾವ ನಾಟೀಕಾರ, ರಾಜೀವ ಜಾನೆ, ಜಗನ್ನಾಥ ಗೋಧಿ, ಶಿವಕುಮಾರ ಬಾಳಿ, ಮಲ್ಲಿಕಾರ್ಜುನ ಸಾಗರ, ಚಂದ್ರಿಕಾ ಪರಮೇಶ್ವರ ಹಾಗೂ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು