ನಿಯಮ ಮೀರಿ ಕುಲಪತಿ ನೇಮಕ?

ಬುಧವಾರ, ಜೂನ್ 19, 2019
31 °C
ಸಂಶಯಕ್ಕೆಡೆ ಮಾಡಿದ ರಾಜ್ಯಪಾಲರ ನಡೆ

ನಿಯಮ ಮೀರಿ ಕುಲಪತಿ ನೇಮಕ?

Published:
Updated:

ಬೆಂಗಳೂರು: ಮಂಗಳೂರು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಯನ್ನಾಗಿ ಡಾ.ಪಿ.ಎಸ್‌.ಯಡಪಡಿತ್ತಾಯ ಅವರ ನೇಮಕವಾಗಿರುವ ಬೆನ್ನಲ್ಲೇ, ಉನ್ನತ ಶಿಕ್ಷಣ ವಲಯದಲ್ಲಿ ರಾಜ್ಯಪಾಲರ ನಡೆ ಸಂಶಯ ಹುಟ್ಟುಹಾಕಿದೆ.

ಕುಲಪತಿ ನೇಮಕಾತಿಗಾಗಿ ರಚಿಸಲಾಗಿದ್ದ ಶೋಧನಾ ಸಮಿತಿ ಸರ್ಕಾರಕ್ಕೆ ಮೂವರ ಹೆಸರನ್ನು ಸೂಚಿಸಿತ್ತು. ಅದರಲ್ಲಿ ಪ್ರೊ.ಬಿ.ನಾರಾಯಣ, ಪ್ರೊ.ಎಂ.ಬಿ.ರಾಜೇಗೌಡ ಮತ್ತು ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರ ಹೆಸರಿತ್ತು. ಸರ್ಕಾರ ಈ ಪೈಕಿ ರಾಜೇಗೌಡರ ಹೆಸರನ್ನು ಶಿಫಾರಸು ಮಾಡಿತ್ತು. 

ರಾಜ್ಯಪಾಲರು ಈ ಶಿಫಾರಸನ್ನು ತಿರಸ್ಕರಿಸಿ ಸರ್ಕಾರಕ್ಕೆ ವಾಪಸ್‌ ಕಳುಹಿಸಿದ್ದರು. ಸರ್ಕಾರ ಮತ್ತೊಮ್ಮೆ ರಾಜೇಗೌಡರ ಹೆಸರನ್ನೇ ಶಿಫಾರಸು ಮಾಡಿ ರಾಜಭವನಕ್ಕೆ ಕಳುಹಿಸಿತ್ತು. ಈ ಹಂತದಲ್ಲಿ ರಾಜ್ಯಪಾಲರು ಸರ್ಕಾರ ಸೂಚಿಸಿದ ಹೆಸರನ್ನೇ ಕುಲಪತಿ ಹುದ್ದೆಗೆ ಆಯ್ಕೆ ಮಾಡಬೇಕು. ರಾಜ್ಯಪಾಲರಿಗೆ ಈಗಲೂ ಈ ಶಿಫಾರಸಿನಲ್ಲಿ ನಂಬಿಕೆ ಇಲ್ಲ ಎಂದಾದರೆ ಪಟ್ಟಿಯಲ್ಲಿರುವ ಇತರ ಇಬ್ಬರ ಹೆಸರಲ್ಲಿ ಒಬ್ಬರ ಹೆಸರನ್ನು ಆಯ್ಕೆ ಮಾಡುವ ಅಧಿಕಾರ ಇಲ್ಲ, ಬದಲಿಗೆ ಶೋಧನಾ ಸಮಿತಿಯಿಂದ ಬೇರೆ ಮೂವರ ಹೆಸರು ಸೂಚಿಸುವಂತೆ ತಿಳಿಸುವ ಅಧಿಕಾರ ಇದೆ.

‘ಸರ್ಕಾರದಿಂದ ಎರಡನೇ ಬಾರಿಗೆ ರಾಜೇಗೌಡರ ಹೆಸರನ್ನೇ ಶಿಫಾರಸು ಮಾಡಿ ರಾಜಭವನಕ್ಕೆ ಕಳುಹಿಸಿರುವುದು ನಿಜ. ಅದು ಹೇಗೆ ಬದಲಾಯಿತು, ಏಕೆ ಬದಲಾಯಿತು ಎಂಬುದು ಗೊತ್ತಿಲ್ಲ’ ಎಂದು ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾನೂನು ಪ್ರಕಾರವೇ ನೇಮಕ: ‘ಈ ಹಿಂದೆ ಮೈಸೂರು ವಿಶ್ವವಿದ್ಯಾಲಯದ ನೇಮಕಾತಿ ವಿಚಾರದಲ್ಲಿ ಆಗಿರುವ ಪ್ರಸಂಗವನ್ನು ಆಧರಿಸಿ ಈಗ ವಿವಾದ ಎದ್ದಿರಬಹುದು. ಆಗ ಶಿಫಾರಸು ಮಾಡಿದ್ದ ಮೂರೂ ಹೆಸರುಗಳಿಗೆ ಕಳಂಕ ಇತ್ತು. ಆದರೆ ಇದೀಗ ಅಂತಹ ಸಮಸ್ಯೆ ಇಲ್ಲ. ರಾಜೇಗೌಡರ ನೇಮಕಾತಿಗೆ ವಯಸ್ಸಿನ ಅಡ್ಡಿ ಇತ್ತು. ಉಳಿದ ಇಬ್ಬರಲ್ಲಿ ನಾನು ಹಿರಿಯ ಮತ್ತು ಅನುಭವಿ ಎಂಬ ಕಾರಣಕ್ಕೆ ನನ್ನ ನೇಮಕಾತಿ ಆಗಿರಬಹುದು. ನನ್ನ ವಿರುದ್ಧ ಯಾವುದೇ ಕಪ್ಪು ಚುಕ್ಕಿ ಇಲ್ಲವಲ್ಲ?’ ಎಂದು ಡಾ.ಪಿ.ಎಸ್‌.ಯಡಪಡಿತ್ತಾಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !