ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜೇಶ್ವರ: ಶೇ 73ರಷ್ಟು ಮತದಾನ

ಸಂಪೂರ್ಣ ಶಾಂತಿಯುತ: ಮಹಿಳೆಯರಿಂದ ಶೇ 75 ರಷ್ಟು ಮತದಾನ
Last Updated 22 ಅಕ್ಟೋಬರ್ 2019, 4:45 IST
ಅಕ್ಷರ ಗಾತ್ರ

ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ನಡೆದ ಉಪ ಚುನಾವಣೆಯಲ್ಲಿ ಶೇ 73 ಮತದಾನವಾಗಿದೆ. ಮತದಾನ ಶಾಂತಿಯುತವಾಗಿತ್ತು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರೀ ಬಂದೋಬಸ್ತ್ ಮಾಡಲಾಗಿತ್ತು. ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದರು. ಮಹಿಳೆಯರು ಶೇ 75 ರಷ್ಟು ಮತದಾನ ಮಾಡಿದ್ದರೆ, ಪುರುಷರು ಶೇ 70 ರಷ್ಟು ಮತ ಚಲಾಯಿಸಿದ್ದಾರೆ.

ಆರಂಭದಲ್ಲಿ ಮತದಾನ ನಿಧಾನವಾಗಿ ಸಾಗಿದರೂ, 10 ಗಂಟೆಯ ನಂತರ ಬಿರುಸು ಪಡೆಯಿತು. ಕರಾವಳಿ ವಲಯದಲ್ಲಿ ಉತ್ತಮ ಮತದಾನ ಆಗಿದೆ. ಸಂಜೆ ಆರು ಗಂಟೆಯ ತನಕ ಸರದಿ ನಿಂತ ಎಲ್ಲರಿಗೂ ಮತದಾನ ಮಾಡುವ ಅವಕಾಶ ನೀಡಲಾಗಿತ್ತು.

ಮಂಜೇಶ್ವರ ಕ್ಷೇತ್ರದಲ್ಲಿ ಒಟ್ಟು 2,14,779 ಮತದಾರರಿದ್ದಾರೆ. ಈ ಪೈಕಿ 1,07,851 ಪುರುಷರು, 1,06,928 ಮಹಿಳೆಯರಿದ್ದಾರೆ.

ಬೆಳಿಗ್ಗೆ ಮತದಾನ ಆರಂಭದ ವೇಳೆಗೆ 17 ವಿವಿಪಾಟ್ ಯಂತ್ರ ಹಾಗೂ ನಾಲ್ಕು ಮತದಾನ ಯಂತ್ರಗಳು ವಿವಿಧೆಡೆ ಕೆಟ್ಟಿದ್ದವು. ಕೂಡಲೇ ದುರಸ್ತಿ ಮಾಡಿ, ಮತದಾನ ಆರಂಭಿಸಲಾಗಿತ್ತು. ಕುಂಬಳೆಯ ಮತಗಟ್ಟೆ ಒಂದರಲ್ಲಿ ಯಂತ್ರ ಕೆಟ್ಟು ಮತದಾನಕ್ಕೆ ಸ್ವಲ್ಪ ಕಾಲ ವಿಳಂಬವಾಗಿತ್ತು.

2016 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದಲ್ಲಿ ಶೇ 76.35 ರಷ್ಟು ಮತದಾನವಾಗಿದ್ದರೆ, ಲೋಕಸಭಾ ಚುನಾವಣೆಯಲ್ಲಿ ಶೇ 75.87 ಮತದಾನ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT