ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀ ಟೂ, ಯಾರೂ ಸಂತ್ರಸ್ತರಲ್ಲ: ರಾಣಿ ಸತೀಶ್‌

Last Updated 26 ಅಕ್ಟೋಬರ್ 2018, 9:32 IST
ಅಕ್ಷರ ಗಾತ್ರ

ಬಳ್ಳಾರಿ: ‘ಮೀ ಟೂ ಅಭಿಯಾನದಲ್ಲಿ ಯಾರೂ ಸಂತ್ರಸ್ತರಲ್ಲ. ಚರ್ಚೆಗಳು ನಡೆದು ತೀರ್ಪು ಪ್ರಕಟವಾಗುವವರೆಗೂ ಪುರುಷ–ಮಹಿಳೆ ನೆಲೆಯಲ್ಲಿ ದೂರುವುದು ಸರಿಯಲ್ಲ’ ಎಂದು ಕಾಂಗ್ರೆಸ್‌ ಮುಖಂಡರಾದ ರಾಣಿ ಸತೀಶ್‌ ಪ್ರತಿಪಾದಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೀ ಟೂ ಅಭಿಯಾನ ಎಂದರೇನೂ ಎಂದೇ ರಾಜ್ಯದ ಬಹಳ ಜನರಿಗೆ ಗೊತ್ತಿಲ್ಲ. ಮೀ ಟೂ ಅಭಿಯಾನದ ಅಂಗವಾಗಿ ಲೈಂಗಿಕ ಕಿರುಕುಳ ಆರೋಪ ಬಂದ ಕಾರಣಕ್ಕೆ ಕೇಂದ್ರ ಸಚಿವ ಅಕ್ಬರ್‌ ರಾಜೀನಾಮೆ ನೀಡಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್‌ ಅವರನ್ನೂ ಆ ಸ್ಥಾನದಿಂದ ತೆಗೆಯಲಾಯಿತು’ ಎಂದರು.

’ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತು ಸುಪ್ರೀಂ ಕೋರ್ಟ್‌ ತೀರ್ಪಿಗೆ ಜನವಿರೋಧ ವ್ಯಕ್ತವಾಗಿದೆ. ಯಾವುದೇ ಧಾರ್ಮಿಕ ನಂಬಿಕೆ ಬದಲಾಗಲು ಹೆಚ್ಚು ಸಮಯ ಬೇಕು. ಜನರ ನಡುವೆ ಚರ್ಚೆಗಳು ನಡೆಯಬೇಕು. ಸಂವಿಧಾನಾತ್ಮಕವಾದ ಹಕ್ಕುಗಳ ಬಗ್ಗೆ ಜಾಗೃತಿಯೂ ಮೂಡಬೇಕು’ ಎಂದು ಪ್ರತಿಪಾದಿಸಿದರು.

ಅವರೊಂದಿಗಿದ್ದ ಪ್ರಫುಲ್ಲಾ ಮಧುಕರ್‌, ‘ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೆಣ್ಣು ಹೇಳಿಕೊಳ್ಳುವುದು ಕಡಿಮೆ ಸಂಕಟದ ವಿಷಯವಲ್ಲ’ ಎಂದು ಪ್ರಫುಲ್ಲಾ ಮಧುಕರ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT