ಮಹದಾಯಿ ನೀರು ಬಳಕೆಗೆ ‘ಸೂಕ್ಷ್ಮ ನೀರಾವರಿ’

7

ಮಹದಾಯಿ ನೀರು ಬಳಕೆಗೆ ‘ಸೂಕ್ಷ್ಮ ನೀರಾವರಿ’

Published:
Updated:

ಬೆಂಗಳೂರು: ಬೆಳಗಾವಿ, ಧಾರವಾಡ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಒಟ್ಟು 9 ತಾಲ್ಲೂಕಿನ ರೈತರಿಗೆ ಮಹದಾಯಿ ನೀರು ಒದಗಿಸಬಹುದಾದ ‘ಸೂಕ್ಷ ನೀರಾವರಿ ಯೋಜನೆ’ಯನ್ನು ಸಹ್ಯಾದ್ರಿ ಜಲ–ಜನ ಸೊಸೈಟಿ ರೂಪಿಸಿದೆ.

ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ ಸೊಸೈಟಿಯ ಉಪಾಧ್ಯಕ್ಷ ಡಾ. ರಂಗನಾಥ್, ‘ಮಹದಾಯಿ ಜಲವಿವಾದ ಇತ್ಯರ್ಥವಾದ ನಂತರ ಎಷ್ಟು ನೀರು ಸಿಗಬಹುದು ಎಂದು ಅಂದಾಜಿಸಿ, ಅದನ್ನು ಶೇಖರಿಸಲು ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಳ್ಳದಿರುವುದರಿಂದ ನಮ್ಮ ಸಂಸ್ಥೆಯಿಂದ ಈ ಯೋಜನೆಯನ್ನು ಸಿದ್ಧಪಡಿಸಿದೆವು’ ಎಂದರು.

‘ಮಲಪ್ರಭಾ ಅಣೆಕಟ್ಟಿನಲ್ಲಿ 44 ಟಿಎಂಸಿ ಅಡಿ ನೀರು ಸಂಗ್ರಹಿಸಬಹುದು. ಆದರೆ, ಈಗ ಹೂಳು ತುಂಬಿಕೊಂಡಿರುವುದರಿಂದ ಕೇವಲ 27 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹಿಸಬಹುದಾಗಿದೆ. ಇದೇ ನೀರಿನಲ್ಲಿ ಕುಡಿಯುವ ನೀರು ಮತ್ತು ನೀರಾವರಿ ಕ್ಷೇತ್ರಕ್ಕೆ ನೀರನ್ನು ಒದಗಿಸುತ್ತಿದ್ದಾರೆ’ ಎಂದು ವಿವರಿಸಿದರು.

‘ಸದ್ಯ 20,657 ಹೆಕ್ಟೇರ್‌ ಪ್ರದೇಶಕ್ಕೆ ಮಾತ್ರ ನೀರು ಒದಗಿಸಲಾಗುತ್ತಿದೆ. ನಮ್ಮ ಯೋಜನೆಯ ಮೂಲಕ 2,74,721 ಹೆಕ್ಟೇರ್‌ ಪ್ರದೇಶಕ್ಕೆ ನೀರು ನೀಡಬಹುದು. ಈಗಿರುವ ಸಣ್ಣ ನೀರಾವರಿ ಕೆರೆಗಳಿಗೆ, ಬ್ಯಾರೇಜ್‌ಗಳಿಗೆ ನೀರನ್ನು ಹರಿಸುತ್ತೇವೆ’ ಎಂದು ಹೇಳಿದರು.

‘ಈ ಯೋಜನೆ ವೆಚ್ಚ 13,800 ಕೋಟಿಯಾಗಿದೆ. ಕೇಂದ್ರ ಸರ್ಕಾರ ಶೇ 60ರಷ್ಟು ಹಣ ನೀಡುವುದಾಗಿ ಮೌಕಿಕವಾಗಿ ತಿಳಿಸಿದೆ. ರಾಜ್ಯ ಸರ್ಕಾರ ಶೇ 40ರಷ್ಟು ನೀಡಬೇಕಿದೆ. ಯೋಜನೆ ಅನುಮೋದನೆಗೊಂಡರೆ ರಾಜ್ಯದ ಪಾಲನ್ನು ನಮ್ಮ ಸಂಘದಿಂದಲೇ ಸಂಗ್ರಹಿಸಿ ಯೋಜನೆಯನ್ನು ಪ್ರಾರಂಭಿಸಲು ಚಿಂತನೆ ನಡೆಸಿದ್ದೇವೆ’ ಎಂದು ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !