ಸೋಮವಾರ, ನವೆಂಬರ್ 18, 2019
25 °C

ನಿದ್ರೆಯ ಮಂಪರಿನಲ್ಲಿ ಹಂಪ್ ಹತ್ತಿಸಿದಾಗ ಅಪಘಾತ-ಇಬ್ಬರ ಸಾವು

Published:
Updated:

ನಾಗಮಂಗಲ: ಬೆಂಗಳೂರು–ಮಂಗಳೂರು ಹೆದ್ದಾರಿಯ ಕದಬಹಳ್ಳಿ ಸರ್ಕಲ್‌ನಲ್ಲಿ ಭಾನುವಾರ ತಡರಾತ್ರಿ ಮಿನಿ ಬಸ್‌ ಉರುಳಿ ಇಬ್ಬರು ಯುವಕರು ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಬೇಗೂರು ಗ್ರಾಮದ ದರ್ಶನ್‌ (17), ಗೌತಮ್‌ (20) ಮೃತಪಟ್ಟವರು. ಧರ್ಮಸ್ಥಳಕ್ಕೆ ತೆರಳಿ ವಾಪಸಾಗುತ್ತಿದ್ದಾಗ ಘಟನೆ ನಡೆದಿದೆ. ಮಧ್ಯರಾತ್ರಿ 1 ಗಂಟೆಯ ಸಮಯದಲ್ಲಿ ಘಟನೆ ನಡೆದಿದೆ. ನಿದ್ದೆಯ ಮಂಪರಿನಲ್ಲಿದ್ದ ಚಾಲಕ ವೇಗವಾಗಿ ಬಂದು ಹಂಪ್‌ ಹತ್ತಿಸಿದ್ದಾನೆ. ಹಾರಿದ ಬಸ್‌ ಕೆಳಕ್ಕೆ ಉರುಳಿದೆ. ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಿಂಡಿಗನವಿಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)