ಬೆಂಗಳೂರು: 'ನಮ್ಮ ಸರ್ಕಾರವಿರುವುದು ಬಡವರಿಗೆ ಹಾಗೂ ನಿಮಗೋಸ್ಕರ. ಯಾವುದೇ ಸಂದರ್ಭದಲ್ಲೂ ನಾವು ಚಾಲಕರ ಕೈ ಬಿಡುವ ಮಾತಿಲ್ಲ. ನಿಮ್ಮ ಜೊತೆಗೆ ನಾವು ಯಾವಾಗಲೂ ಇರ್ತೀವಿ' ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಹೇಳಿದರು.

ಶುಕ್ರವಾರ ಮಹಾಲಕ್ಷ್ಮಿ ವಿಧಾನ ಸಭಾ ಕ್ಷೇತ್ರದ, ಕಮಲಮ್ಮನ ಗುಂಡಿ ಆಟದ ಮೈದಾನದಲ್ಲಿ, 4 ಸಾವಿರ ಆಟೊ, ಲಾರಿ, ಟೆಂಪೋ, ಮತ್ತು ಬಸ್ ಚಾಲಕರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು.'ಇವತ್ತು ನಮ್ಮ ಕ್ಷೇತ್ರದ ಎಲ್ಲಾ ಚಾಲಕರಿಗೆ ಆಹಾರದ ಕಿಟ್ ಗಳನ್ನ ವಿತರಿಸಲಾಗಿದೆ. ಇನ್ನು ಯಾರ ಹೆಸರು ಇದರಲ್ಲಿ ಬಿಟ್ಟೋಗಿದೆ ಅವರ ಹೆಸರುಗಳನ್ನ ಬರೆಸುತ್ತಿದ್ದೀನಿ. ಅವರಿಗೆ ನನ್ನ ಕಚೇರಿಯಲ್ಲಿ ಕಿಟ್‌ಗಳನ್ನು ಕೊಡಲಾಗುವುದು' ಎಂದರು.

ಆಟೊ ಚಾಲಕರ ಕಷ್ಟಕ್ಕೆ ನಮ್ಮ ಸರ್ಕಾರ ಸ್ಪಂದಿಸುತ್ತಿದ್ದು ಅವರಿಗೆ ₹ 5000 ಸಾವಿರ ಪರಿಹಾರ ಹಣ ಘೋಷಣೆ ಮಾಡಿದೆ.ಆಟೊ ಚಾಲಕರು ಹಣ ಪಡೆಯೋದಕ್ಕೆ ಅಗತ್ಯ ದಾಖಲೆಗಳನ್ನು ಕೊಡಬೇಕು ಅದನ್ನು ನನ್ನ ಕಚೇರಿಯಲ್ಲೇ ಪ್ರಾರಂಭಿಸಲಾಗುವುದು ಎಂದರು.

ಬಡ ವಲಸೆ ಕಾರ್ಮಿಕರಿಗೆ ಆಹಾರದ ಕೊರತೆಯಾಗಬಾರದೆಂದು ನಮ್ಮ ಸರ್ಕಾರ ಯಾರ ಬಳಿ ರೇಷನ್ ಕಾರ್ಡ್ ಇಲ್ಲ ಅವರಿಗೆ ಉಚಿತ ಆಹಾರ ಧಾನ್ಯಗಳನ್ನ ಕೊಡಬೇಕು ಅನ್ನೋ ನಿರ್ಧಾರವನ್ನು ಮಾಡಿದೆ. ನೀವು ನಿಮ್ಮ ಆಧಾರ್ ಕಾರ್ಡ್ ತೋರಿಸಿ ನ್ಯಾಯಲಬೆಲೆ ಅಂಗಡಿಗಳಲ್ಲಿ 26 ರಿಂದ ರೇಷನ್ ಪಡೆಯಬಹುದು. ಇದೇ ತಿಂಗಳ 26 ರಿಂದ 31ರವರೆಗೆ ಪ್ರತಿ ವ್ಯಕ್ತಿಗೆ 5ಕೆ.ಜಿ ಅಕ್ಕಿ ಉಚಿತವಾಗಿ ನೀಡಲು ನಿರ್ಧರಿಸಿದ್ದು, ಮುಂದಿನ ತಿಂಗಳು ಜೂನ್ 1 ರಿಂದ ದಿನಾಂಕ 10 ರವರೆಗೆ ಪ್ರತಿ ವ್ಯಕ್ತಿಗೆ 5ಕೆಜಿ ಅಕ್ಕಿ ಮತ್ತು ಪ್ರತಿ ಕುಟುಂಬಕ್ಕೆ 2 ಕೆಜಿ ಕಡಲೆಕಾಳು ಉಚಿತವಾಗಿ ನೀಡಲಾಗುತ್ತದೆ. ನಿಮ್ಮಗಳ ಜೊತೆ ನಾವು ಮತ್ತು ನಮ್ಮ ಸರ್ಕಾರ ಇರುತ್ತೆ. ಯಾರು ಹೆದರ ಬೇಕಿಲ್ಲ ಎಂದು ತಿಳಿಸಿದರು.

ಸಚಿವ ಆರ್. ಅಶೋಕ ಮಾತನಾಡಿ, ಇಡೀ ದೇಶ ಇವತ್ತು ಒಟ್ಟಾಗಿ ಕೊರೊನೊಮಹಾಮಾರಿಯನ್ನು ದೇಶದಿಂದ ಹೊರಹಾಕಬೇಕೆಂದು ನಿರಂತರವಾಗಿ ಕೆಲಸ ಮಾಡುತ್ತಿದೆ. ವಿಶೇಷವಾಗಿ ನಾವೆಲ್ಲರೂಈ ಸಂದರ್ಭದಲ್ಲಿ ವೈದ್ಯರಿಗೆ, ನರ್ಸ್, ಆಶಾ ಕಾರ್ಯಕರ್ತೆಯರು, ಪೊಲೀಸರಿಗೆ ಜೊತೆಗೆ ಮಾಧ್ಯಮದವರಿಗೆ ಧನ್ಯವಾದಗಳನ್ನು ಅರ್ಪಿಸಬೇಕು. ಕೊರೋನಾ ಬಂತಂದ್ರೆ ಎಲ್ಲಾರೂನಮ್ಮನ್ನು ಹೊರಹಾಕುತ್ತಾರೆ. ಆದರೆ ಇವರು ಧೈರ್ಯದಿಂದಕೆಲಸ ಮಾಡುತ್ತಿದ್ದಾರೆ. ಕೊರೋನಾ ರೋಗಿಗಳು ಇದ್ದಲ್ಲೇ ಹೋಗಿ ಆಶಾ ಕಾರ್ಯಕರ್ತೆಯರು ಔಷಧಿಗಳನ್ನ ಕೊಡುತ್ತಿದ್ದಾರೆ ಎಂದು ತಿಳಿಸಿದರು.

ಬೇರೆ ದೇಶಗಳಲ್ಲಿ ಜನ ಸಾಯೋಕೆ ಮುಂಚೆನೆ ಗುಂಡಿಗಳನ್ನ ತೋಡುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ನಮ್ಮ ಪ್ರಧಾನಿ ಜನರ ಪ್ರಾಣಗಳನ್ನು ಕಾಪಾಡಬೇಕೆಂದುಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇವತ್ತು ಕರ್ನಾಟಕದಲ್ಲಿ ಕೊರೋನ ಸಾಕಷ್ಟು ನಿಯಂತ್ರಣವಾಗಿದ್ದು ಅದಕ್ಕೆ ನಮ್ಮ ನಾಯಕರಾದ ಯಡಿಯುರಪ್ಪನವರೆ ಕಾರಣ ಎಂದು ಹೇಳಿದರು.

ಮಾಜಿ ಶಾಸಕರಾದ ಮುನಿರಾಜು, ನರೇಂದ್ರಬಾಬು, ಮಾಜಿ ಉಪಮೇಯರ್ ಎಸ್ ಹರೀಶ್, ಪಾಲಿಕೆ ಸದಸ್ಯ ರಾಜೇಂದ್ರ ಕುಮಾರ್, ಕ್ಷೇತ್ರದ ಮಂಡಲ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಬೆಂಗಳೂರು ಉತ್ತರ ಜಿಲ್ಲೆ ಉಪಾದ್ಯಕ್ಷಜಯರಾಮಯ್ಯ, ಮುಖಂಡರುಗಳಾದ ಶ್ರೀನಿವಾಸ್, ನಿಸರ್ಗ ಜಗದೀಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.