ಶಾಸಕ ಮಹದೇವ್‌ ನಿಷ್ಠೆ ಪ್ರಶ್ನಿಸಿದ ಯುವತಿ!

ಬುಧವಾರ, ಜೂಲೈ 17, 2019
30 °C
ಮೊದಲ ಪತ್ನಿ ಮಗಳೆಂದು ಹೇಳಿಕೊಂಡು ಟೀಕಿಸಿದ ವಿಡಿಯೊ ವೈರಲ್

ಶಾಸಕ ಮಹದೇವ್‌ ನಿಷ್ಠೆ ಪ್ರಶ್ನಿಸಿದ ಯುವತಿ!

Published:
Updated:

ಮೈಸೂರು: ಪಿರಿಯಾಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಮಹದೇವ್‌ ಅವರ ಮೊದಲ ಪತ್ನಿಯ ಮಗಳು ಎಂದು ಹೇಳಿಕೊಂಡಿರುವ ಮಾಲಿನಿ ಎಂಬ ಯುವತಿ, ಮಹದೇವ್‌ ಅವರ ಕೌಟುಂಬಿಕ ನಿಷ್ಠೆಯನ್ನು ಟೀಕಿಸಿದ ವಿಡಿಯೊ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ.

ತಮಗೆ ಬಿಜೆಪಿ ₹ 40 ಕೋಟಿ ಆಮಿಷ ಒಡ್ಡಿದ್ದರೂ ತಾವು ಪಕ್ಷಕ್ಕೆ ನಿಷ್ಠರಾಗಿ ಉಳಿದಿದ್ದಾಗಿ ಎರಡು ದಿನಗಳ ಹಿಂದೆ ಶಾಸಕ ಮಹದೇವ್‌ ಹೇಳಿದ್ದರು. ಅವರ ಈ ಹೇಳಿಕೆಯನ್ನು ಇಟ್ಟುಕೊಂಡು, ಈ ಯುವತಿ ‘ಶಾಸಕರು ಇದೇ ನಿಷ್ಠೆಯನ್ನುಕುಟುಂಬದ ವಿಷಯದಲ್ಲೂ ತೋರಬೇಕಿತ್ತು’ ಎಂದಿದ್ದಾರೆ.

‘ನಿಮ್ಮ ಈ ಸ್ವಾಭಿಮಾನ, ನಿಷ್ಠೆ ಕುಟುಂಬಕ್ಕೂ ಇದ್ದಿದ್ದರೆ ನಾನು, ನನ್ನ ತಾಯಿ ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮದಲ್ಲಿ ಕೂಲಿ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕಿರಲಿಲ್ಲ. ವರದಕ್ಷಿಣೆ ರೂಪದಲ್ಲಿ ಚಿನ್ನ ತರಲಿಲ್ಲ ಎಂದು ಆಳಿಗಿಂತ ಕೀಳಾಗಿ ಕಂಡು, ಊಟ ಹಾಕದೆ, ಹೆಣ್ಣು ಮಗಳಿದ್ದಾಳೆ ಎಂಬುದನ್ನೂ ಪರಿಗಣಿಸದೆ ಪತ್ನಿಯನ್ನು ಮನೆಯಿಂದ ಹೊರ ಹಾಕುವಾಗ ನಿಮ್ಮ ನಿಷ್ಠೆ,ಸ್ವಾಭಿಮಾನ ಎಲ್ಲಿ ಹೋಗಿತ್ತು’ ಎಂದು ಪ್ರಶ್ನಿಸಿರುವುದು ವಿಡಿಯೊದಲ್ಲಿದೆ.

‘ನನ್ನ ವಿಡಿಯೊ ಹೇಳಿಕೆ ಸುಳ್ಳು ಎಂದು ನೀವು ನಿರಾಕರಿಸುವುದಿದ್ದರೆ ಒಮ್ಮೆ ನಮ್ಮ ಮುಂದೆ ನಿಂತು ಮಾತನಾಡಿ. ಆಗ ನಿಮ್ಮ ನಿಷ್ಠೆ ಏನು ಎಂಬುದನ್ನು ಸೋಷಿಯಲ್ ಮೀಡಿಯಾ ಮೂಲಕವೇ ಜಗಜ್ಜಾಹೀರುಗೊಳಿಸುವೆ. ತಮ್ಮ ಕುಟುಂಬಕ್ಕೆ ನಿಷ್ಠರಾಗಿದ್ದಾರಾ? ನಮಗೆ ನ್ಯಾಯ ಕೊಟ್ಟಿದ್ದಾರಾ ಎಂಬುದನ್ನು ಮಹದೇವ್‌ ಮೊದಲು ಹೇಳಲಿ. ಈವಿಡಿಯೊ ಸರ್ಕಾರಕ್ಕೆ ತಲುಪುವ ತನಕವೂ ಶೇರ್ ಮಾಡಿ’ ಎಂದು ಯುವತಿ ಹೇಳಿರುವುದು ವಿಡಿಯೊದಲ್ಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !