4 ಗಂಟೆ ವಾಹನ ಸಂಚಾರ ಸ್ಥಗಿತ

7
ಕೊಚ್ಚಿ ಹೋದ ಕೆಂಪು ಮಣ್ಣು, ಕಲ್ಲು: ಅಂತರ್ಜಲ ಕುಸಿತಕ್ಕೆ ಕಾರಣ

4 ಗಂಟೆ ವಾಹನ ಸಂಚಾರ ಸ್ಥಗಿತ

Published:
Updated:

ಮೂಡಿಗೆರೆ: ತಾಲ್ಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾನುವಾರ ಮುಂಜಾನೆ ಲಾರಿಯೊಂದು ಕೆಟ್ಟು ರಸ್ತೆ ಮಧ್ಯೆ ನಿಂತಿದ್ದರಿಂದ 4 ಗಂಟೆಗೂ ಅಧಿಕ ಕಾಲ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದರು.

ತುಮಕೂರಿನಿಂದ ಮಂಗಳೂರಿಗೆ ಸರಕು ಸಾಗಿಸುತ್ತಿದ್ದ ಲಾರಿ ಮುಂಜಾನೆ 4 ಗಂಟೆಯ ಸುಮಾರಿಗೆ 3ನೇ ತಿರುವಿನ ಬಳಿ ಆ್ಯಕ್ಸೆಲ್ ತುಂಡಾಗಿ ರಸ್ತೆಗೆ ಅಡ್ಡಲಾಗಿ ನಿಂತಿದ್ದರಿಂದ ಎರಡೂ ಕಡೆ ವಾಹನ ಸಂಚರಿಸಲಾಗದೆ ಬೆಳಿಗ್ಗೆ 8 ಗಂಟೆಯವರೆಗೂ ಸಂಚಾರ ಸ್ಥಗಿತವಾಗಿತ್ತು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಹಿಟಾಚಿ ಯಂತ್ರದ ಮೂಲಕ ಲಾರಿಯನ್ನು ಎಳೆದೊಯ್ದು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !