ಶುಕ್ರವಾರ, ಮೇ 29, 2020
27 °C

ಪ್ರಯಾಣಿಕ, ಸರಕು ಸಾರಿಗೆ ವಾಹನ: 2 ತಿಂಗಳ ಮೋಟಾರು ವಾಹನ ತೆರಿಗೆ ವಿನಾಯ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ನೋಂದಾಯಿಸಿರುವ(ಹೊಸ ವಾಹನ ಬಿಟ್ಟು) ಎಲ್ಲ ಪ್ರಯಾಣಿಕ ಮತ್ತು ಸರಕು ಸಾರಿಗೆ ವಾಹನಗಳ ಮೋಟಾರು ತೆರಿಗೆಯನ್ನು  ಮಾರ್ಚ್‌ 24 ರಿಂದ ಮೇ 23 ರವರೆಗೆ ಒಟ್ಟು ಎರಡು ತಿಂಗಳ ಅವಧಿಗೆ ವಿನಾಯಿತಿ ನೀಡಲಾಗಿದೆ.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಈ ವಿಷಯ ತಿಳಿಸಿದ್ದಾರೆ. ಖಾಸಗಿ ಬಸ್ಸುಗಳ ಮಾಲೀಕರು ಈ ಸಂಬಂಧ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದರು.

ಅಲ್ಲದೆ, ಲಾಕ್‌ಡೌನ್‌ ಅನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಕಳುಹಿಸಲು, ಸರ್ಕಾರದಿಂದ ಅನುಮತಿ ಪಡೆದರೆ ಜೂನ್‌ 30 ರವರೆಗೆ ರಹದಾರಿಗಳಿಂದ ವಿನಾಯಿತಿ ಮತ್ತು  ಮೋಟಾರು ವಾಹನ ತೆರಿಗೆ ವಿನಾಯಿತಿ ನೀಡಲಾಗುವುದು ಎಂದು ಸವದಿ ಹೇಳಿದ್ದಾರೆ.

ಸರಕು ಸಾಗಣೆ ವಾಹನಗಳಿಗೆ ಅನ್ವಯಿಸುವಂತೆ ಏಪ್ರಿಲ್‌ 15 ರೊಳಗೆ ಪಾವತಿಸಬೇಕಿದ್ದ ದ್ವಿಪಕ್ಷೀಯ ತೆರಿಗೆ ದಂಡ ರಹಿತವಾಗಿ ಪಾವತಿಸಲು ಅವಧಿಯನ್ನು ಜೂನ್‌ 1 ರವರೆಗೆ ವಿಸ್ತರಿಸಲಾಗಿದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು