ಇಂದು ಮಧ್ಯಾಹ್ನ 2ಕ್ಕೆ ‘ನೀಟ್‌’: ತುಂಬು ತೋಳಿನ ಅಂಗಿ, ಮೂಗುತಿ, ಶೂ ಧರಿಸಬೇಡಿ

ಸೋಮವಾರ, ಮೇ 27, 2019
33 °C

ಇಂದು ಮಧ್ಯಾಹ್ನ 2ಕ್ಕೆ ‘ನೀಟ್‌’: ತುಂಬು ತೋಳಿನ ಅಂಗಿ, ಮೂಗುತಿ, ಶೂ ಧರಿಸಬೇಡಿ

Published:
Updated:

ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅಗತ್ಯವಾಗಿರುವ ರಾಷ್ಟ್ರೀಯ ಅರ್ಹತೆ–ಪ್ರವೇಶ ಪರೀಕ್ಷೆ (ನೀಟ್‌) ಭಾನುವಾರ ಮಧ್ಯಾಹ್ನ 2ರಿಂದ ದೇಶದ ವಿವಿಧ ಕೇಂದ್ರಗಳಲ್ಲಿ ನಡೆಯಲಿದ್ದು, ಸುಮಾರು 15.19 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ಪರೀಕ್ಷೆಗೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗಿದ್ದು, ಅವುಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ತಿಳಿಸಲಾಗಿದೆ.

ಅಭ್ಯರ್ಥಿಗಳು ತುಂಬು ತೋಳಿದ ಅಂಗಿ ತೊಡುವಂತಿಲ್ಲ. ಶೂ ಧರಿಸುವಂತಿಲ್ಲ. ರಿಂಗ್‌, ಮೂಗುತಿ, ಚೈನ್‌, ಪದಕಗಳ ಸಹಿತ ಯಾವುದೇ ಆಭರಣ ತೊಡುವಂತಿಲ್ಲ. ಒಂದು ವೇಳೆ ತೊಟ್ಟುಕೊಂಡು ಹೋದರೆ ಅವುಗಳನ್ನು ಕೇಂದ್ರದ ಹೊರಗಡೆಯೇ ಬಿಚ್ಚಿಡಲು ತಿಳಿಸಲಾಗುತ್ತದೆ. ಹೀಗೆ ಬಿಚ್ಚಿಟ್ಟ ವಸ್ತುಗಳಿಗೆ ಸೂಕ್ತ ಭದ್ರತೆ ಒದಗಿಸುವ ವ್ಯವಸ್ಥೆ ಇಲ್ಲ ಎಂದು ಈಗಾಗಲೇ ತಿಳಿಸಲಾಗಿದೆ.‌

ಯಾವುದು ನಿಷಿದ್ಧ?

ಜತೆಗೆ ಇರಲಿ

ನೀಟ್‌ ಅಡ್ಮಿಟ್‌ ಕಾರ್ಡ್‌, ಪಾಸ್‌ಪೋರ್ಟ್‌ ಅಳತೆಯ ಫೋಟೊ ಮತ್ತು ಒಂದು ಗುರುತಿನ ಚೀಟಿ

ಅವಧಿ ಏನು?

ಅಭ್ಯರ್ಥಿಗಳು ಮಧ್ಯಾಹ್ನ1.15ಕ್ಕೆ ಪರೀಕ್ಷಾ ಕೇಂದ್ರದೊಳಗೆ ಇರಬೇಕು. 1.30ರ ನಂತರ ಕೇಂದ್ರಕ್ಕೆ ಬರುವವರಿಗೆ ಪ್ರವೇಶ ಇರುವುದಿಲ್ಲ. 1.15ಕ್ಕೆ ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳನ್ನು ನೀಡಲಾಗುತ್ತದೆ. 1.30ರಿಂದ 1.45ರವರೆಗೆ ಪರೀಕ್ಷಾ ಬುಕ್‌ಲೆಟ್‌ ನೀಡಲಾಗುತ್ತದೆ. 1.50ಕ್ಕೆ ಬುಕ್‌ಲೆಟ್‌ನಲ್ಲಿ ಅಗತ್ಯವಾಗಿ ಬರೆಯಬೇಕಾದುದನ್ನು ಬರೆಯಲು ತಿಳಿಸಲಾಗುತ್ತದೆ. 2ರಿಂದ 5ರವರೆಗೆ ಪರೀಕ್ಷೆ ನಡೆಯಲಿದೆ.

ಪರೀಕ್ಷಾ ಕೇಂದ್ರಗಳು

ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ದಾವಣಗೆರೆ, ಮಂಗಳೂರು, ಉಡುಪಿಗಳಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿ ‘ನೀಟ್‌’ ನಡೆಯಲಿದೆ.

Tags: 

ಬರಹ ಇಷ್ಟವಾಯಿತೆ?

 • 23

  Happy
 • 2

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !