ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕ್ಕೂ ಮಣೆ, ಹಿಂದಿ ಹೇರಿಕೆ ಇಲ್ಲ

ರಾಷ್ಟ್ರೀಯ ಶಿಕ್ಷಣ ನೀತಿಯ ಅಂತಿಮ ಕರಡು ಸಿದ್ಧ, ಪ್ರಾದೇಶಿಕ ಭಾಷೆಗೆ ಆದ್ಯತೆ
Last Updated 30 ಅಕ್ಟೋಬರ್ 2019, 19:29 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ಲಕ್ಷಕ್ಕೂಅಧಿಕಸಲಹೆಗಳನ್ನುಸೇರಿಸಿಕೊಂಡರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ)55 ಪುಟಗಳ ಅಂತಿಮ ಕರಡು ಸಿದ್ಧವಾಗಿದ್ದು, ಹಿಂದಿ ಹೇರಿಕೆಯ ಪ್ರಸ್ತಾವವನ್ನು ಕೈಬಿಡಲಾಗಿದೆ ಹಾಗೂ ಕನ್ನಡವೂ ಸೇರಿದಂತೆ ಶಾಸ್ತ್ರೀಯ ಭಾಷೆಗಳನ್ನು ದೇಶದಾದ್ಯಂತ ಕಲಿಯು ವುದಕ್ಕೆ ಉತ್ತೇಜನ ನೀಡಲಾಗಿದೆ.

ನಾಲ್ಕು ತಿಂಗಳ ಹಿಂದೆಎನ್‌ಇಪಿಯ ಕರಡು ಬಿಡುಗಡೆಗೊಂಡಾಗ ಹಿಂದಿ ಹೇರಿಕೆ ಪ್ರಸ್ತಾಪದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಜನರ ಭಾವನೆಗೆ ಸ್ಪಂದಿಸಿರುವ ಎನ್‌ಇಪಿ ರಚನಾ ತಜ್ಞರು, ದೇಶದಲ್ಲಿ ಮೂರು ಭಾಷೆಯ ಸೂತ್ರವನ್ನು ಉಳಿಸಿಕೊಂಡಿದ್ದರೂ, ಯಾವ ರಾಜ್ಯದಲ್ಲೂ ಯಾವ ಭಾಷೆಯನ್ನೂ ಹೇರಿಕೆ ಮಾಡಲಾಗದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಎಂಟನೇ ತರಗತಿವರೆಗೆ ಮಾತೃ ಭಾಷೆಯಲ್ಲೇ ಕಲಿಕಾ ಮಾಧ್ಯಮ ಇರಬೇಕು, ಬಳಿಕ ಅದನ್ನು ಒಂದು ಭಾಷಾ ವಿಷಯವಾಗಿ ಕಲಿಸಬಹುದು, 6ನೇ ತರಗತಿಯ ಬಳಿಕ ವಿಜ್ಞಾನವನ್ನು ಮಾತೃಭಾಷೆಯ ಜತೆಗೆ ಇಂಗ್ಲಿಷ್‌ ಮೂಲಕವೂ ಕಲಿಸಬಹುದು. ಇದರಿಂದ 9ನೇ ತರಗತಿಗೆ ಬರುವಾಗ ಇಂಗ್ಲಿಷ್‌ನಲ್ಲಿ ವಿಜ್ಞಾನದ ವ್ಯವಹಾರ ಸುಲಲಿತವಾಗುತ್ತದೆ ಎಂದು ತಿಳಿಸಲಾಗಿದೆ.

ಕನ್ನಡಕ್ಕೆ ಗೌರವ, ಸಂಸ್ಕೃತಕ್ಕೆ ಆದ್ಯತೆ: ಕನ್ನಡವೂ ಸೇರಿದಂತೆ ಸಂಸ್ಕೃತ, ತಮಿಳು, ತೆಲುಗು, ಮಲಯಾಳ, ಒಡಿಯಾ, ಪಾಲಿ, ಪ್ರಾಕೃತ, ಪರ್ಶಿಯನ್‌ ಭಾಷೆಗಳಲ್ಲಿ ಅಪಾರ ಬೌದ್ಧಿಕ ಮತ್ತು ಸಾಂಸ್ಕೃತಿಕ ಭಂಡಾರವೇ ಅಡಗಿದೆ. ಹೀಗಾಗಿ ದೇಶದ ಎಲ್ಲೆಡೆ 6ರಿಂದ 12ನೇ ತರಗತಿಯ ನಡುವೆ ಇವುಗಳ ಕಲಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಶಿಕ್ಷಣ ನೀತಿಯಲ್ಲಿ ತಿಳಿಸಲಾಗಿದೆ.

ಲ್ಯಾಟಿನ್‌ ಮತ್ತು ಗ್ರೀಕ್‌ಗಿಂತಲೂ ಪುರಾತನವಾದ ಹಾಗೂ ಅಪಾರ ಪ್ರಮಾಣದ ಸಾಹಿತ್ಯ ಕೃತಿಗಳನ್ನು ಹೊಂದಿರುವ ಸಂಸ್ಕೃತಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಮಾತ್ರವಲ್ಲ, ಉನ್ನತ ಶಿಕ್ಷಣದಲ್ಲೂ ಸಂಸ್ಕೃತವನ್ನು ಒಂದು ಐಚ್ಛಿಕ ಭಾಷಾ ವಿಷಯವಾಗಿ ಇಡಲು ಸೂಚಿಸಲಾಗಿದೆ. ಜತೆಗೆ ಸಂವಿಧಾನದ 8ನೇ ಪರಿಚ್ಛೇದದಲ್ಲಿ ನಮೂದಾಗಿರುವ ಎಲ್ಲ ಭಾಷೆಗಳ ಪಠ್ಯಗಳೂ ದೇಶದೆಲ್ಲೆಡೆ ದೊರೆಯುವಂತೆ, ಆನ್‌ಲೈನ್‌ನಲ್ಲೂ ಸುಲಭವಾಗಿ ಸಿಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಪ್ರೌಢ ಶಿಕ್ಷಣದ ಹಂತದಲ್ಲಿ ಕೊರಿಯನ್‌, ಚೈನೀಸ್‌, ಜಪಾನೀಸ್‌, ಥಾಯ್‌, ಫ್ರೆಂಚ್‌, ಜರ್ಮನ್‌, ಸ್ಪಾನಿಷ್‌ ಅಥವಾ ರಷ್ಯನ್‌ ಭಾಷೆಗಳನ್ನು ಕಲಿಸಿದರೆ ಜಾಗತಿಕ ಭಾಷೆ, ಸಂಸ್ಕೃತಿಗಳನ್ನು ವಿದ್ಯಾರ್ಥಿಗಳು ಬೇಗನೆ ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗಬಹುದು ಎಂದೂ ನೀತಿಯಲ್ಲಿ ಸಲಹೆ ನೀಡಲಾಗಿದೆ.

ಉನ್ನತ ಶಿಕ್ಷಣ: ಹಲವು ಹೊಸ ಸಾಧ್ಯತೆಗಳ ಅನಾವರಣ

l3 ಅಥವಾ 4 ವರ್ಷದ ಲಿಬರಲ್‌ ಕಲಾ ಶಿಕ್ಷಣ

lಐಐಟಿ, ಐಐಎಂನಂತಹ ಮಾದರಿ ‘ಮೇರು’ (ಮಲ್ಟಿಡಿಸಿಪ್ಲನರಿ ಎಜುಕೇಷನ್‌ ಆ್ಯಂಡ್ ರೀಸರ್ಚ್‌ ಯೂನಿವರ್ಸಿಟಿ) ವಿವಿಗಳ ಸ್ಥಾಪನೆ

l2030ರ ವೇಳೆಗೆ 4 ವರ್ಷದ ಬಿ.ಇಡಿ ಶಿಕ್ಷಣ ಶಾಲಾ ಶಿಕ್ಷಕರ ಕನಿಷ್ಠ
ವಿದ್ಯಾರ್ಹತೆಯಾಗಿರಬೇಕು

lಎಲ್ಲಾ ಪಿಎಚ್‌.ಡಿ ಆಕಾಂಕ್ಷಿಗಳು ಬೋಧನೆ, ಶಿಕ್ಷಣದಲ್ಲಿ ಕನಿಷ್ಠ 8 ಕ್ರೆಡಿಟ್‌ ಕೋರ್ಸ್‌ಗಳನ್ನು ಮಾಡಿರಬೇಕು

l19–24 ವಯೋಮಿತಿಯ ಶೇ 5ರಷ್ಟು ಮಂದಿ ಮಾತ್ರ ವೃತ್ತಿಪರ ಶಿಕ್ಷಣ ಪಡೆಯುತ್ತಿದ್ದು, ಇದನ್ನು ಹೆಚ್ಚಿಸಲು ಕ್ರಮಕ್ಕೆ ಸಲಹೆ. ದಕ್ಷಿಣ ಕೊರಿಯಾದಲ್ಲಿ ಇದು ಶೇ 96, ಜರ್ಮನಿಯಲ್ಲಿ ಇದು ಶೇ 75, ಅಮೆರಿಕದಲ್ಲಿ ಶೇ 52ರಷ್ಟಿದೆ.

lರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಸ್ಥಾಪನೆ

ರಾಷ್ಟ್ರೀಯ ಶಿಕ್ಷಣ ಆಯೋಗ ರಚನೆ

ಈಗ ಅಸ್ತಿತ್ವದಲ್ಲಿರುವಶಿಕ್ಷಣ ಕುರಿತ ಕೇಂದ್ರೀಯ ಸಲಹಾ ಮಂಡಳಿಯ ಬದಲಿಗೆ ರಾಷ್ಟ್ರೀಯ ಶಿಕ್ಷಣ ಆಯೋಗ ರಚನೆಯಾಗಲಿದೆ. ಇದಕ್ಕೆ ಕೇಂದ್ರ ಶಿಕ್ಷಣ ಸಚಿವರು ಅಧ್ಯಕ್ಷರಾಗಿರುತ್ತಾರೆ. ಬಹುತೇಕ ಶಿಕ್ಷಣ ತಜ್ಞರನ್ನೇ ಒಳಗೊಂಡ 30 ಮಂದಿ ಸದಸ್ಯರು ಇದರಲ್ಲಿರುತ್ತಾರೆ. ರಾಜ್ಯ ಮಟ್ಟದಲ್ಲೂ ರಾಜ್ಯ ಶಿಕ್ಷಣ ಆಯೋಗ ರಚಿಸಬಹುದು ಎಂದು ತಿಳಿಸಲಾಗಿದೆ.

ಉನ್ನತ ಶಿಕ್ಷಣ: ಹಲವು ಹೊಸ ಸಾಧ್ಯತೆಗಳ ಅನಾವರಣ

*3 ಅಥವಾ 4 ವರ್ಷದ ಲಿಬರಲ್‌ ಕಲಾ ಶಿಕ್ಷಣ

*ಐಐಟಿ, ಐಐಎಂನಂತಹ ಮಾದರಿ ‘ಮೇರು’ (ಮಲ್ಟಿಡಿಸಿಪ್ಲನರಿ ಎಜುಕೇಷನ್‌ ಆ್ಯಂಡ್ ರೀಸರ್ಚ್‌ ಯೂನಿವರ್ಸಿಟಿ) ವಿವಿಗಳ ಸ್ಥಾಪನೆ

*2030ರ ವೇಳೆಗೆ 4 ವರ್ಷದ ಬಿ.ಇಡಿ ಶಿಕ್ಷಣ ಶಾಲಾ ಶಿಕ್ಷಕರ ಕನಿಷ್ಠ ವಿದ್ಯಾರ್ಹತೆಯಾಗಿರಬೇಕು

*ಎಲ್ಲಾ ಪಿಎಚ್‌.ಡಿ ಆಕಾಂಕ್ಷಿಗಳು ಬೋಧನೆ, ಶಿಕ್ಷಣದಲ್ಲಿ ಕನಿಷ್ಠ 8 ಕ್ರೆಡಿಟ್‌ ಕೋರ್ಸ್‌ಗಳನ್ನು ಮಾಡಿರಬೇಕು

*19–24 ವಯೋಮಿತಿಯ ಶೇ 5ರಷ್ಟು ಮಂದಿ ಮಾತ್ರ ವೃತ್ತಿಪರ ಶಿಕ್ಷಣ ಪಡೆಯುತ್ತಿದ್ದು, ಇದನ್ನು ಹೆಚ್ಚಿಸಲು ಕ್ರಮಕ್ಕೆ ಸಲಹೆ. ದಕ್ಷಿಣ ಕೊರಿಯಾದಲ್ಲಿ ಇದು ಶೇ 96, ಜರ್ಮನಿಯಲ್ಲಿ ಇದು ಶೇ 75, ಅಮೆರಿಕದಲ್ಲಿ ಶೇ 52ರಷ್ಟಿದೆ.

*ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಸ್ಥಾಪನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT