ಶನಿವಾರ, ನವೆಂಬರ್ 23, 2019
18 °C
ಮಡಿಕೇರಿಯಲ್ಲಿ ಸಚಿವ ಸಿ.ಟಿ.ರವಿ ಟೀಕೆ

‘ಸಸಿಕಾಂತ್‌ ಸೆಂಥಿಲ್ ‘ಫಸ್ಟ್‌ ರ‍್ಯಾಂಕ್‌ ರಾಜು' ಇದ್ದಂತೆ’

Published:
Updated:

ಮಡಿಕೇರಿ: ‘ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹುದ್ದೆಗೆ ಇತ್ತೀಚೆಗೆ ರಾಜೀನಾಮೆ ನೀಡಿರುವ ಸಸಿಕಾಂತ್‌ ಸೆಂಥಿಲ್‌, ಸಾಮಾನ್ಯ ಜ್ಞಾನವಿಲ್ಲದ ‘ಫಸ್ಟ್‌ ರ‍್ಯಾಂಕ್ ರಾಜು’ ಇದ್ದಂತೆ’ ಎಂದು ಸಚಿವ ಸಿ.ಟಿ.ರವಿ ಇಲ್ಲಿ ಬುಧವಾರ ಟೀಕಿಸಿದರು.

‘ರಾಮ ಮಂದಿರ ನಿರ್ಮಾಣ ವಿಚಾರ ಹಾಗೂ 370ನೇ ವಿಧಿ ರದ್ದತಿ ನೋವು ತಂದಿದ್ದರಿಂದ ರಾಜೀನಾಮೆ ನೀಡಿರುವುದಾಗಿ ಸಸಿಕಾಂತ್‌ ಹೇಳಿಕೊಂಡಿದ್ದಾರೆ. 370ನೇ ವಿಧಿ ತಾತ್ಕಾಲಿಕ ಎಂದು ಸಂವಿಧಾನದಲ್ಲೇ ಇದೆ. ಐಎಎಸ್‌ ಅಧಿಕಾರಿಗೆ ತಾತ್ಕಾಲಿಕ ಎಂಬ ಪದದ ಅರ್ಥ ತಿಳಿದಿರುವುದಾಗಿ ಭಾವಿಸಿದ್ದೆ. ಬಳಹಷ್ಟು ಮಂದಿಗೆ ‘ಫಸ್ಟ್‌ ರ‍್ಯಾಂಕ್ ರಾಜು’ನಂತೆ ಸಾಮಾನ್ಯ ಜ್ಞಾನ ಇರುವುದಿಲ್ಲ. ಸಾಮಾನ್ಯ ಜ್ಞಾನವಿಲ್ಲದ ವ್ಯಕ್ತಿಗಳಲ್ಲಿ ಸೆಂಥಿಲ್‌ ಸಹ ಒಬ್ಬರು’ ಎಂದು ಟೀಕಿಸಿದರು.

‘370ನೇ ವಿಧಿ ರದ್ದತಿ ಹಾಗೂ ರಾಮಮಂದಿರ ನಿರ್ಮಾಣ ಇವು ಬಿಜೆಪಿ ಚುನಾವಣೆ ಪ್ರಣಾಳಿಕೆಯಲ್ಲಿದ್ದ ವಿಚಾರಗಳು’ ಎಂದು ಅವರು ಹೇಳಿದರು.

 

ಪ್ರತಿಕ್ರಿಯಿಸಿ (+)