ಸೋಮವಾರ, ಏಪ್ರಿಲ್ 19, 2021
32 °C

‘ರಾಜೀನಾಮೆ ತಿರಸ್ಕರಿಸಲು ಸಾಧ್ಯವಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 13 ಶಾಸಕರು ಸ್ವ ಇಚ್ಛೆಯಿಂದಲೇ ಬಂದು ರಾಜೀನಾಮೆ ನೀಡಿರುವುದರಿಂದ ಅಂಗೀಕರಿಸಲು ಕೆಲವು ದಿನ ವಿಳಂಬ ಮಾಡಬಹುದೇ ವಿನಃ ಅದನ್ನು ತಿರಸ್ಕರಿಸಲು ಅವಕಾಶವಿಲ್ಲ.

ಒಂದು ವೇಳೆ ರಾಜೀನಾಮೆ ಪತ್ರದಲ್ಲಿ ಸಣ್ಣ ಪುಟ್ಟ ತಾಂತ್ರಿಕ ತಪ್ಪುಗಳಿದ್ದರೆ ಅದನ್ನು ಸರಿಪಡಿಸಲು ರಾಜೀನಾಮೆ ಕೊಟ್ಟ ಶಾಸಕರಿಗೆ ಅವಕಾಶ ಇರುತ್ತದೆ. ಒಂದು ವೇಳೆ ರಾಜೀನಾಮೆ ನೀಡಿದವರು ಮನಸ್ಸು ಬದಲಿಸಿ ರಾಜೀನಾಮೆ ಪತ್ರ ಹಿಂದಕ್ಕೆ ಪಡೆಯಲು ಬಯಸಿದರೆ, ಅದಕ್ಕೂ ಸಭಾಧ್ಯಕ್ಷರು ಅವಕಾಶ ನೀಡಬಹುದು ಎಂದು ಸಚಿವಾಲಯದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಶಾಸಕ ಸ್ಥಾನಕ್ಕೆ ಸ್ವಯಂ ಇಚ್ಛೆಯಿಂದ ರಾಜೀನಾಮೆ ಕೊಟ್ಟಿರುವುದು ಮತ್ತು ತಮ್ಮದು ದೃಢ ನಿರ್ಧಾರ ಎಂಬುದು ಸಭಾಧ್ಯಕ್ಷರಿಗೆ ಮನವರಿಕೆ ಆಗಬೇಕು. ಇವಿಷ್ಟು ಬಿಟ್ಟು ಬೇರೆ ಏನೂ ಮಾಡಲು ಆಗುವುದಿಲ್ಲ ಎಂದು ಮೂಲಗಳು ಹೇಳಿವೆ.

ಮಂಗಳವಾರ ಸಭಾಧ್ಯಕ್ಷರು ಬೆಂಗಳೂರಿಗೆ ಬರುವುದರಿಂದ ಆ ದಿನ ತಮ್ಮ ತೀರ್ಮಾನ ಪ್ರಕಟಿಸಬಹುದು. ಈ ಹಿಂದೆ ಡಾ.ಉಮೇಶ್‌ ಜಾಧವ್‌ ಅವರನ್ನು ಕರೆಸಿ ವಿಚಾರಣೆ ಮಾಡಿದ ರೀತಿಯಲ್ಲೇ 13 ಶಾಸಕರನ್ನು ಕರೆಸಿ, ರಾಜೀನಾಮೆ ನಿರ್ಧಾರದ ಬಗ್ಗೆ ಮಾಹಿತಿ ಪಡೆಯಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು