ಕೊಡಗಿನಲ್ಲಿ ರೈಲು ಮಾರ್ಗ: ಸರ್ವೆಗೆ ಅನುಮತಿ ನೀಡಿಲ್ಲ

7
ಕಂದಾಯ ಸಚಿವ ಸ್ಪಷ್ಟನೆ

ಕೊಡಗಿನಲ್ಲಿ ರೈಲು ಮಾರ್ಗ: ಸರ್ವೆಗೆ ಅನುಮತಿ ನೀಡಿಲ್ಲ

Published:
Updated:

ಬೆಂಗಳೂರು: ಮೈಸೂರು–ತಲಶ್ಶೇರಿ ರೈಲು ಮಾರ್ಗ ನಿರ್ಮಿಸುವ ಸಲುವಾಗಿ ಕೊಡಗು ಜಿಲ್ಲೆಯಲ್ಲಿ ಸರ್ವೆ ನಡೆಸುವುದಕ್ಕೆ ಸರ್ಕಾರ ಯಾರಿಗೂ ಅನುಮತಿ ನೀಡಿಲ್ಲ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಸ್ಪಷ್ಟಪಡಿಸಿದರು.

ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಸುನಿಲ್‌ ಸುಬ್ರಮಣಿ ಅವರ ಪ್ರಶ್ನೆಗೆ ಮಂಗಳವಾರ ಉತ್ತರಿಸಿದ ಸಚಿವರು, ‘ಕೇರಳ ಸರ್ಕಾರ ನಮ್ಮ ಅನುಮತಿ ಪಡೆಯದೇಯೇ ಅಲ್ಲಿ ಸರ್ವೆ ನಡಸಿದ್ದರೆ ಕ್ರಮ ಕೈಗೊಳ್ಳುತ್ತೇವೆ’ ಎಂದರು  ‘ಈ ರೈಲು ಮಾರ್ಗಕ್ಕೆ ಅನುಮತಿ ನೀಡುವಂತೆ ಕೇರಳ ಸರ್ಕಾರ ಮನವಿ ಮಾಡಿಕೊಂಡಿರುವುದು ನಿಜ. ಈ ಬಗ್ಗೆ ಸರ್ಕಾರದ ಮುಖ್ಯಕಾರ್ಯದರ್ಶಿಗಳ ಹಂತದಲ್ಲಿ ಸಭೆಗಳು ನಡೆದಿರುವುದೂ ನಿಜ. ಸಮೃದ್ಧ ಅರಣ್ಯ ಪ್ರದೇಶವನ್ನು ಹೊಂದಿರುವ ಈ ಪ್ರದೇಶದಲ್ಲಿ ಆನೆ ಕಾರಿಡಾರ್‌ಗಳು ಹಾದು ಹೋಗುತ್ತದೆ. ಹಾಗಾಗಿ ಈ ರೈಲು ಮಾರ್ಗಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಆ ಸಭೆಯಲ್ಲೇ ಸ್ಪಷ್ಟಪಡಿಸಲಾಗಿದೆ’ ಎಂದು ತಿಳಿಸಿದರು.

‘ಪರಿಸರ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಯಾವುದೇ ಕಾರಣಕ್ಕೆ ಭವಿಷ್ಯದಲ್ಲೂ ಈ ರೈಲು ಮಾರ್ಗಕ್ಕೆ ಅನುಮತಿ ನೀಡುವುದಿಲ್ಲ. ಈ ಬಗ್ಗೆ ಆತಂಕ ಬೇಡ’ ಎಂದು ಭರವಸೆ ನೀಡಿದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !