ಶುಕ್ರವಾರ, ಜನವರಿ 17, 2020
19 °C

ಶಾಸಕರ ಸಂಖ್ಯೆ 21ರ ಬದಲು 51 ಆಗಲಿ: ಪ್ರಸನ್ನಾನಂದಪುರಿ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ‘ಹರನ ಉಪಾಸಕರಾದ ವೀರಶೈವ ಲಿಂಗಾಯತ ಪಂಚಮಸಾಲಿಗಳು ಮತ್ತು ಹರಿಯ ಉಪಾಸಕ
ರಾದ ವಾಲ್ಮೀಕಿ ಸಮುದಾಯದವರು ಭಾವನಾತ್ಮಕವಾಗಿ ಒಂದಾಗಿರಬೇಕು. ಈ ಎರಡೂ ಸಮುದಾಯಗಳವರು ಅಸಂಘಟಿತರಾಗಿ ಇರುವಾಗಲೇ 21 ಮಂದಿ ಶಾಸಕರಾಗಿದ್ದಾರೆ. ಈ ಸಂಖ್ಯೆಯನ್ನು 51ಕ್ಕೆ ತಲುಪಿಸಬೇಕು’ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

‘ಪಂಚಮಸಾಲಿಗಳನ್ನು ಬೇರೆಯವರು ಇಲ್ಲಿಯವರೆಗೆ ಬಳಸಿಕೊಂಡರು. ಇನ್ನು ಜಾಗೃತರಾಗಲು ಈ ಜಾತ್ರೆ ಹಮ್ಮಿಕೊಳ್ಳಲಾಗಿದೆ.

‘ಮುಖ್ಯಮಂತ್ರಿ ಯಡಿಯೂರಪ್ಪ ಇತ್ತೀಚೆಗೆ ಯಾಕೋ ಖಡಕ್‌ ನಿರ್ಧಾರ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ’ ಎಂದು ವಿಷಾದಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು