ಜನತಾ ಪರಿವಾರದ ಹಿರಿಯ ಮುಖಂಡ ಎಂ.ಸಂಜೀವ ನಿಧನ

ಮಂಗಳವಾರ, ಜೂಲೈ 16, 2019
23 °C

ಜನತಾ ಪರಿವಾರದ ಹಿರಿಯ ಮುಖಂಡ ಎಂ.ಸಂಜೀವ ನಿಧನ

Published:
Updated:
Prajavani

ಮಂಗಳೂರು: ಜನತಾ ಪರಿವಾರದ ಹಿರಿಯ ಮುಖಂಡ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ. ಸಂಜೀವ (86) ಸೋಮವಾರ ನಗರದ ತಮ್ಮ ನಿವಾಸದಲ್ಲಿ ನಿಧನರಾದರು.

ಎಂ.ಸಂಜೀವ ಅವರು ವಿವಾಹ ಆಗಿರಲಿಲ್ಲ. ಶಾಲಾ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಅವರನ್ನು ಮೀಸಾ ಕಾಯ್ದೆಯಡಿ ಹಲವು ಬಾರಿ ಬಂಧಿಸಲಾಗಿತ್ತು. ಭೂಸುಧಾರಣಾ ಕಾಯ್ದೆಯ ಜಾರಿ ಕಾಲದಲ್ಲಿ ಬಡವರಿಗೆ ಜಮೀನು ದೊರಕಿಸುವ ಮತ್ತು ಬಾಡಿಗೆದಾರರ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ವಿರುದ್ಧದ ಹೋರಾಟಗಳಲ್ಲಿ ಸಕ್ರಿಯರಾಗಿದ್ದರು.

ಸೋಮವಾರ ಸಂಜೆ ನಗರದಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !