ಶನಿವಾರ, ಸೆಪ್ಟೆಂಬರ್ 19, 2020
22 °C
ದಿನ ಭವಿಷ್ಯ, ಇಂದಿನ ಪಂಚಾಂಗ

ಅ.21ರಂದು ಜನಿಸಿದವರ ಭವಿಷ್ಯ ಫಲ: ಅಪ್ರತಿಮ ಸಾಧಕರೆನಿಸುವ ಸಾಧ್ಯತೆ!

21-10-2019 Updated:

ಅಕ್ಷರ ಗಾತ್ರ : | |

ಅಕ್ಟೋಬರ್‌ 21ರಂದು ಜನಿಸಿದವರ ಭವಿಷ್ಯ ಫಲಗಳ ವಿವರ ಇಲ್ಲಿದೆ.

ಈ ದಿನದಂದು ಜನಿಸಿದವರಿಗೆ ಇದು ಅತ್ಯಂತ ಶುಭದಿನ. ಮನಸ್ಸಿಗೆ ಸಂಬಂಧಪಟ್ಟ ಕಾರ್ಯದಿಂದ ಉತ್ತಮ ಯಶಸ್ಸು. ಮನೋವೈದ್ಯರು ತಜ್ಞರುಗಳಿಗೆ ಬಿಡುವಿಲ್ಲದ ಕಾರ್ಯ. ಅಪ್ರತಿಮ ಸಾಧಕರೆನಿಸುವ ಸಾಧ್ಯತೆ. ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಗಮನವಿರಲಿ. ಕ್ರೀಡಾಪಟುಗಳು, ಕುಸ್ತಿ ಪಟುಗಳಿಗೆ ಹೆಚ್ಚಿನ ಸಾಧನೆಗೆ ಅವಕಾಶ ದೊರತು ಕೀರ್ತಿ ಲಾಭ. ವಿದೇಶಕ್ಕೆ ತೆರಳಲಿರುವ ಮಕ್ಕಳಿಗೆ ಸಹಾಯ ದೊರಕಿಸಿಕೊಡಲಿದ್ದೀರಿ. ಸ್ವಯಂ ಉದ್ಯೋಗಿಗಳಿಗೆ ಉತ್ತಮ ಕಾಲ. ವನಪಾಲಕರಿಗೆ ನೆಮ್ಮದಿ. ವಾಹನ ಚಾಲಕರಿಗೆ ಒಳ್ಳೆಯ ಸಮಯ.

ಅ.21ರ ದಿನ ಪಂಚಾಂಗ

ಶ್ರೀವಿಕಾರಿ ನಾಮ ಸಂವತ್ಸರ ದಕ್ಷಿಣಾಯನ ಶರದೃತು. ಆಶ್ವಯುಜ ಮಾಸ. ಕೃಷ್ಣ ಪಕ್ಷ. ಮಳೆ ನಕ್ಷತ್ರ ಚಿತ್ತಾ ಅಷ್ಟಮಿ ಗಂ. 46-44 (ರಾ. 12-59) ಸೋಮವಾರ ನಿತ್ಯ ನಕ್ಷತ್ರ ಪುನರ್ವಸು ಗಂ. 20-31 (ಹ. 2-30) ಸಿದ್ಧ ನಾಮ ಯೋಗ ಗಂ 35-19 ಬಾಲವ ಕರಣ ಗಂ. 18-44 ವಿಷ ಗಂ. 39-39 ಅಮೃತ ಗಂ. 14-2 ರಾಹುಕಾಲ: ಬೆ. 7-30 ರಿಂದ 9-00 ಗುಳಿಕಕಾಲ: ಮ. 1-30 ರಿಂದ 3-00 ಯಮಗಂಡ ಕಾಲ: ಬೆ. 10-30 ರಿಂದ 12-00 ಸೂರ್ಯೋದಯ: 6-14 ಸೂರ್ಯಾಸ್ತ: 5-55 ಅದೃಷ್ಟ ಸಂಖ್ಯೆ 5, 7.

* ಇಲ್ಲಿದೆ ನೋಡಿ: ಇಂದಿನ ನಿಮ್ಮ ರಾಶಿ ಭವಿಷ್ಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.